janadhvani

Kannada Online News Paper

ವಾರಣಾಸಿಯಲ್ಲಿ ಮೋದಿ ವಿರುದ್ಧ ಮುರಳಿ ಮನೋಹರ್ ಜೋಷಿ ಸ್ಪರ್ಧೆ?

ನವದೆಹಲಿ (ಪಿಟಿಐ): ಹಿರಿಯ ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಶಿ ಅವರು ಬಿಜೆಪಿಯಿಂದ ಸೀಟು ಲಭಿಸದ ಹಿನ್ನಲೆಯಲ್ಲಿ ವಾರಣಾಸಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೋದಿ ವಿರುದ್ದ ಸ್ಪರ್ಧಿಸಲು ತಯಾರಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರಾದ ಮುರಳಿ ಮನೋಹರ್ ಜೋಶಿಯವರಿಗೆ ಕಾಂಗ್ರೆಸ್ ಸೀಟ್ ನೀಡುವ ಬರವಸೆ ನೀಡಿದೆ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ.

ಕಾನ್ಪುರದಲ್ಲಿ ಜೋಷಿ ಅವರು ಈ ಬಾರಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು,ಆದರೆ ಅಮಿತ್ ಷಾ-ಮೋದಿ ನಾಯಕತ್ವದ ಬಿಜೆಪಿ ಮೈತ್ರಿಕೂಟವು ವಯಸ್ಕರೆಂದು ಅಡ್ವಾಣಿ ಮತ್ತು ಜೋಷಿ ಅವರಿಗೆ ಸೀಟ್ ನಿರಾಕರಿಸಿದೆ. ಜೋಶಿ ಅವರು ಸಂಸತ್ತಿನ ವಿವಿಧ ಸಮಿತಿಗಳ ಭಾಗವಾಗಿದ್ದು ನಡೆಸಿದ ಪರಾಮರ್ಶೆಯು ಮೋದಿ ಅವರ ಕೆಂಗಣ್ಣಿಗೆ ಗುರಿಯಾಗಿತ್ತು.

ಒಂದು ದಶಕಕ್ಕೂ ಹೆಚ್ಚು ಕಾಲ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿದ್ದ ಜೋಶಿ ಅವರು ಕಳೆದ ಬಾರಿ ಮೋದಿಗಾಗಿ ಸೀಟು ಬಿಟ್ಟುಕೊಟ್ಟು ಕಾಣ್ಪುರದಿಂದ ಸ್ಪರ್ಧಿಸಿದ್ದರು.

ಆದರೆ ಈ ಬಾರಿ ಅಡ್ವಾಣಿಗೆ ಗಾಂಧಿನಗರ ಸ್ಥಾನವನ್ನು ನಿರಾಕರಿಸಿದ ಬಿಜೆಪಿ, ಜೋಶಿಯವರಿಗೂ ಸ್ಪರ್ಧಿಸದಂತೆ ಹೇಳಿದೆ. ಇದರಿಂದ ಕುಪಿತಗೊಂಡು ಬಿಜೆಪಿ ವಿರುದ್ದ ಬಹಿರಂಗ ವಿಮರ್ಷೆಗೆ ಮುಂದಾದ ಜೋಶಿಯವರನ್ನು ಸಮಾಧಾನ ಪಡಿಸಲು ಬಿಜೆಪಿ ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್ ನಿಂದ ಈ ಬೆಳವಣೆಗೆ ಉಂಟಾಗಿದೆ.

error: Content is protected !! Not allowed copy content from janadhvani.com