janadhvani

Kannada Online News Paper

ಸೂರಿಕುಮೇರು ಬದ್ರಿಯಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ

ಮಾಣಿ : ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಮತ ಪ್ರಭಾಷಣ ಕಾರ್ಯಕ್ರಮವು ಮಾರ್ಚ್ 30 ಹಾಗೂ 31 ರಂದು ನಡೆಯಲಿದೆ.ಕಾರ್ಯಕ್ರಮದ ಮೊದಲ ದಿನ ಶನಿವಾರ ಮಗ್ರಿಬ್ ನಮಾಝ್ ಬಳಿಕ ಅನಸ್ ಸಿದ್ದಿಖಿ ಕಾಮಿಲ್ ಸಖಾಫಿ ಶಿರಿಯಾ,ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಖಲೀಲುರ್ರಹ್ಮಾನ್ ದಾರಿಮಿ ಕಾಸರಗೋಡು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ,ಸ್ವಲಾತ್ ವಾರ್ಷಿಕದ ದುಆ ಕಾರ್ಯಕ್ರಮವನ್ನು ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಮಲಪ್ಪುರಂ ನೆರವೇರಿಸಲಿರುವರು.

ಜನಾಬ್ ಮೂಸಾ ಕರೀಂ ಮಾಣಿ ಅಧ್ಯಕ್ಷತೆಯಲ್ಲಿ ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಉಳ್ತೂರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವರು.ಮುಹಮ್ಮದ್ ಅಲೀ ಮುಸ್ಲಿಯಾರ್,ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು,ಪಿ ಎ ಮುಹಮ್ಮದ್ ರಫೀಕ್ ಮದನಿ ಪಾಟ್ರಕೋಡಿ,ಎನ್ ಹಂಝ ಮದನಿ ನೆಕ್ಕಿಲು,ಅಮೀರುದ್ದೀನ್ ಸೂರಿಕುಮೇರು ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.