ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸುಪ್ರೀಂಕೋರ್ಟ್ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ( ಮಾರ್ಚ್ 20, 2019) ರಂದು ಅರವಿಂದ್ ಕೇಜ್ರಿವಾಲ್ ಮಾಡಿರುವ ಟ್ವೀಟ್‌ವೊಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ದಿಲ್ಲಿ ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಕ್‌ಗೆ ದೂರು ನೀಡಿದ್ದಾರೆ. ಪೊರಕೆ ( ಎಎಪಿ ಚಿಹ್ನೆ ) ಹಿಂದೂಗಳ ಸ್ವಸ್ತಿಕ್ ಚಿಹ್ನೆಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ಫೋಟೋವೊಂದನ್ನು ಅರವಿಂದ್ ಕೇಜ್ರಿವಾಲ್ ತಮ್ಮ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದರು.
Delhi: Complaint filed against Delhi Chief Minister Arvind Kejriwal for allegedly hurting religious sentiments in one of his tweets (in pic). pic.twitter.com/GwQ3OooFHK
— ANI (@ANI) March 23, 2019
ಸ್ವಸ್ತಿಕ್ ಚಿಹ್ನೆ ಹಿಂದೂಗಳ ಪವಿತ್ರ ಸಂಕೇತವಾಗಿದ್ದು, ಇದನ್ನು ಹಲವು ಹಿಂದೂಗಳು ಪೂಜೆ ಮಾಡುತ್ತಾರೆ. ಅಲ್ಲದೆ, ವಿವಿಧ ದಾರ್ಮಿಕ ಸಂಘಟನೆಗಳ ನಡುವೆ ಸಾಮರಸ್ಯ ಇಲ್ಲದಿರುವಂತೆ ಮಾಡುವುದು, ದ್ವೇಷ ಹಾಗೂ ಕೆಟ್ಟ ಭಾವನೆಯನ್ನು ಸೃಷ್ಟಿ ಮಾಡಲು ಈ ರೀತಿ ಟ್ವೀಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ ಎಂದು ಸುಪ್ರೀಂಕೋರ್ಟ್ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಆರೋಪಿಸಿದ್ದಾರೆ.
ಇನ್ನು, ”ಕೇಜ್ರಿವಾಲ್ ವಿರುದ್ಧ ಐಪಿಸಿಯ ಹಲವು ಸೆಕ್ಷನ್‌ಗಳ ಅನುಸಾರ ಎಫ್‌ಐಆರ್ ದಾಖಲಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ಶ್ರೀವಾಸ್ತವ ದೂರಿನಲ್ಲಿ ತಿಳಿಸಿದ್ದಾರೆ.