janadhvani

Kannada Online News Paper

ಕೆಸಿಎಫ್ ಮಲ್ಗಾ ನೂತನ ಯೂನಿಟ್ ಅಸ್ತಿತ್ವಕ್ಕೆ

ರಿಯಾದ್: ಕೆಸಿಎಫ್ ರಿಯಾದ್ ಝೋನ್ ಗೋರ್ನಾಥ ಸೆಕ್ಟರ್ ಅಧೀನದಲ್ಲಿ ಕೆಸಿಎಫ್ ಮಲ್ಗಾ ನೂತನ ಯೂನಿಟ್ ಸಿತಾರ್ ಮುಹಮ್ಮದ್ ಹಾಜಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 14/3/2019 ರಂದು ನಡೆಯಿತು.

KCF ಸೌದಿ ಅರೇಬಿಯಾ ಸಂಘಟನೆ ವಿಭಾಗ ಅಧ್ಯಕ್ಷರು ಬಹು ಸಿದ್ದೀಖ್ ಸಖಾಫಿ ಪೆರುವಾಯಿಯವರು ಕೆ.ಸಿ.ಎಫ್ ನ ಕುರಿತು ಸವಿಸ್ತಾರವಾದ ವಿಷಯಗಳನ್ನು ಮಂಡಿಸಿ ಸಭೆಯನ್ನು ಉಧ್ಘಾಟಿಸಿದರು. ಝೋನ್ ನಿಂದ ರೀ-ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಇಸ್ಮಾಯಿಲ್ ಕನ್ನಂಗಾರ್ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು .

ಅಧ್ಯಕ್ಷರಾಗಿ ಗಫೂರ್ ಯೂಮಾರ್ಚ್, ಉಪಾಧ್ಯಕ್ಷರುಗಳು: ಅಬ್ದುಲ್ ರಹ್ಮಾನ್ ನೇರಳಕಟ್ಟೆ ಮತ್ತು ಅಬ್ದುಲ್ ಅಝೀಝ್ ಬೆಳ್ಳಾರೆ. ಪ್ರ.ಕಾರ್ಯದರ್ಶಿಯಾಗಿ: ಅಬ್ದುಲ್ಲಾ ಅಮ್ಚಿನಡ್ಕ, ಜೊತೆ ಕಾರ್ಯದರ್ಶಿಗಳಾಗಿ: ಮುಸ್ತಾಖ್ UP, ಮುಹಮ್ಮದ್ ಸಾಗರ್. ಕೋಶಾಧಿಕಾರಿಯಾಗಿ: ಖಾಸಿಂ ಕುಕ್ಕಾಜೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫಾರೂಖ್ ಕಕ್ಕಿಂಜೆ, ಅಬ್ದುಲ್ ರಹ್ಮಾನ್ ಕಕ್ಕಿಂಜೆ, ಮುಹಮ್ಮದ್ ಕಾಪು, ಅಬ್ಬಾಸ್ ಯು.ಪಿ, ನಝೀರ್ ಕಕ್ಕಿಂಜೆ, ರಮೀಝ್ ಕುಲಾಯಿ, ರಶೀದ್ ಮದನಿ, ಮುಝಮ್ಮಿಲ್. ಸೆಕ್ಟರ್ ಕೌಂಸಿಲರುಗಳಾಗಿ ರಶೀದ್ ಮದನಿ, ರಮೀಝ್ ಕುಲಾಯಿ, ನಝೀರ್ ಕಕ್ಕಿಂಜೆ, ಅಬ್ಬಾಸ್ ಯು.ಪಿ, ಮುಹಮ್ಮದ್ ಮುಲ್ಕಿ ಎಂಬವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ನವಾಝ್ ಚಿಕ್ಕಮಗಳೂರು ಸ್ವಾಗತಿಸಿದರು, ನಝೀರ್ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿ, ರಮೀಝ್ ಕುಲಾಯಿ ಕೃತಜ್ಞತೆ ಸಲ್ಲಿಸಿದರು.