janadhvani

Kannada Online News Paper

ಸೌದಿ ಪ್ರಿನ್ಸ್ ನಿಧನ- ರಾಯಲ್ ಕೋರ್ಟ್ ಘೋಷಣೆ

ರಿಯಾದ್: ಸೌದಿ ಅರೇಬಿಯಾದ ಯುವರಾಜ ಕುಮಾರ ಫೈಸಲ್ ಬಿನ್ ಬದ್ರ್ ಬಿನ್ ಫಹ್ದ್ ಬಿನ್ ಸಅದ್ ಬಿನ್ ಅಬ್ದುಲ್ ರಹ್ಮಾನ್ ಆಲ್ ಸಊದ್ ನಿಧನ ಹೊಂದಿರುವುದಾಗಿ ಸೌದಿ ರಾಯಲ್ ಕೋರ್ಟ್ ಘೋಷಿಸಿದೆ.

ಇವರ ಹಠಾತ್ ಮರಣವಾರ್ತೆ ಕೇಳಿ ಆಘಾತಗೊಂಡ ಸಂಬಂಧಿಕರು ಮತ್ತು ಅವರ ಫುಟ್ಬಾಲ್ ಅಭಿಮಾನಿಗಳು ಸೋಮವಾರ ರಾತ್ರಿ ಭಾರೀ ಸಂಖ್ಯೆಯಲ್ಲಿ ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದರು.

ಮಂಗಳವಾರ ಅಸರ್ ನಮಾಜಿನ ಬಳಿಕ ರಿಯಾದ್ ನಲ್ಲಿ ಅವರ ಜನಾಝ ಪ್ರಾರ್ಥನೆ ನಡೆಯಲಿದೆ ಎಂದು ಸೌದಿ ರಾಯಲ್ ನ್ಯಾಯಾಲಯ ತಿಳಿಸಿದೆ.