ರಿಯಾದ್: ಸೌದಿ ಟೆಲಿಕಮ್ಯುನಿಕೇಶನ್ ವಲಯದಲ್ಲಿ ಶೀಘ್ರದಲ್ಲೇ ಇ-ಸಿಮ್ ಕಾರ್ಡ್‌ಗಳು ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಸುಧಾರಿತ ಸ್ಮಾರ್ಟ್ ಫೋನ್ ಗಳಲ್ಲಿ ಎಲೆಕ್ಟ್ರಾನಿಕ್ ಸಿಮ್ ಕಾರ್ಡುಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿವೆ.
ಒಂದಕ್ಕಿಂದ ಹೆಚ್ಚು ಸಿಮ್ ಕಾರ್ಡುಗಳ ಸೇವೆಯು ಒಂದೇ ಕಾರ್ಡ್ ನಲ್ಲಿ ಲಭಿಸಲಿದೆ ಎಂಬುದು ಈ ಕಾರ್ಡ್‌ನ ವಿಶೇಷತೆಗಳಲ್ಲಿ ಒಂದಾಗಿದೆ. ಫೋನ್ ಕರೆಗಳನ್ನು ಮಾಡಲು ಮತ್ತು ಇಂಟರ್ ನೆಟ್ ಬಳಸಲು ಒಂದೇ ಸಿಮ್ ಕಾರ್ಡ್ ನಲ್ಲಿ ಅನೇಕ ಸೇವೆಗಳನ್ನು ಗಳಿಸಬಹುದು.
ವಿದೇಶಿ ಪ್ರವಾಸದಲ್ಲಿ, ಹೊಸ ಸಿಮ್ ಕಾರ್ಡ್ ಮೂಲಕ ಸ್ಥಳೀಯ ಮತ್ತು ವಿದೇಶಿ ಕರೆಗಳು ಮತ್ತು ಇಂಟರ್ನೆಟ್ ಬಳಕೆಯ ಪ್ರೋಗ್ರಾಮರ್ಗಳನ್ನು ಕ್ರಮೀಕರಣ ಮಾಡಬಹುದಾಗಿದೆ. ಅಲ್ಲದೆ, ಸಿಮ್ ಕಾರ್ಡ್ ಗಳು ಕ್ಯೂಆರ್ ಕೋಡ್ ಗಳಂತಹವುಗಳನ್ನು ಓದಲು ಮತ್ತು ವಿವಿಧ ಅಪ್ಲಿಕೇಶನ್ ಗಳ ಬಳಕೆಗೆ ಸೂಕ್ತವಾಗಿವೆ.ಐಫೋನ್ ಎಕ್ಸ್ ನಂತಹ ಹೊಸ ಸ್ಮಾರ್ಟ್ಫೋನ್ಗಳಲ್ಲಿ ಇ-ಸಿಮ್ ಕಾರ್ಯನಿರ್ವಹಿಸಲಿದೆ.