ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ರಿಯಾದ್ ಝೋನಿನ ಬದಿಯ ಸೆಕ್ಟರ್ ಅಧೀನದಲ್ಲಿ ನೂತನ ಶಾರಾ ಅಬ್ರಾಝ್ ಯುನಿಟ್ ಅಸ್ತಿತ್ವಕ್ಕೆ ತರಳಾಯಿತು.
ಕೆಸಿಎಫ್ ಬದಿಯ ಸೆಕ್ಟರ್ ಸಾಂತ್ವನ ವಿಭಾಗ ಚೆಯರ್ಮ್ಯಾನ್ ಅಮೀರ್ ಕಲ್ಲಾಪು ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಮದನಿ ಉಪಾಧ್ಯಕ್ಷರುಗಳುಗಳಾಗಿ ಕಾದರ್ ಮಠ, ಕಬೀರ್ ಕೃಷ್ಣಾಪುರ, ಪ್ರ,ಕಾರ್ಯದರ್ಶಿ ತೌಫೀಕ್ ಮುಲ್ಕಿ, ಕಾರ್ಯದರ್ಶಿಗಳಾಗಿ ಶಾಫಿ ಇಲಂತಿಲ, ರವೂಫ್ ಸಾಲೆತ್ತೂರು, ಕೋಶಾಧಿಕಾರಿ ಇಸ್ಮಾಯಿಲ್ ಕಳಂಜಿಬೈಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮೀರ್ ಕಲ್ಲಾಪು, ಬಶೀರ್ ಮೂರುಗೋಳಿ, ರಿಯಾ ನೆಲ್ಯಾಡಿ, ಶಫೀಕ್ ಅಹ್ಸನಿ, ಹಮೀದ್ ಮುಲ್ಕಿ, ಹಸೈನಾರ್ ಬಾಯಾರ್, ಹಮೀದ್ ಮಠ, ಇರ್ಫಾನ್ ಎನ್ ಸಿ ರೋಡ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಗಳಾಗಿ ಕೆಸಿಎಫ್ ರಿಯಾದ್ ಝೋನಲ್ ನಾಯಕರಾದ ನಿಝಾಂ ಸಾಗರ್ ಹಾಗೂ ರಶೀದ್ ಮದನಿ ಉರುವಾಲುಪದವು ರವರು ಆಗಮಿಸಿ ನೂತನ ಸಮಿಯಿ ರಚಿಸಿ ಸಂಘಟನೆಯ ನೀತಿ ನಿಯಮ ಕುರಿತಂತೆ ತರಗತಿ ನಡೆಸಿಕೊಟ್ಟರು. ಸೆಕ್ಟರ್ ನಾಯಕರಾದ ಉಮ್ಮರ್ ಹಾಜಿ ಅಳಕೆಮಜಲ್, ಮಜೀದ್ ವಿಟ್ಲ ಉಪಸ್ಥಿತರಿದ್ದರು.
ಬಶೀರ್ ಮೂರುಗೋಳಿ ಸ್ವಾಗತಿಸಿ ವಂದಿಸಿದರು.
Masha Allah