ಮಸ್ಕತ್: ಗ್ಲೋಬಲ್ ಪಾಸ್ಪೋರ್ಟ್ ಸೇವಾ ಯೋಜನೆಯನ್ನು ಒಮಾನ್‌ನಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು ವಿದೇಶಾಂಗ ಸಚಿವಾಲಯವು ಜಾರಿಗೊಳಿಸುತ್ತಿದ್ದು, ನಾಲ್ಕನೇ ದೇಶವಾಗಿದೆ ಒಮಾನ್. ಅಲ್ಲಿನ ಭಾರತೀಯ ರಾಯಭಾರಿ ಮುನು ಮಹಾವರ್ ಕಾರ್ಯಕ್ರಮವನ್ನು ಮಸ್ಕತ್‌ನ ರಾಯಭಾರಿ ಸಭಾಂಗಣದಲ್ಲಿ ಉದ್ಘಾಟಿಸಿದರು.
ವಿಶ್ವದಾದ್ಯಂತದ ವಿವಿಧ ದೂತಾವಾಸಗಳು ಮತ್ತು ರಾಯಭಾರಿ ಕಚೇರಿಗಳಲ್ಲಿನ ಪಾಸ್‌ಪೋರ್ಟ್ ಸೇವೆಗಳನ್ನು ಕ್ರೋಢೀಕರಿಸುವ ಭಾಗವಾಗಿ ಭಾರತೀಯ ವಿದೇಶಾಂಗ ಖಾತೆಯು ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಪಾಸ್ ಪೋರ್ಟ್ ಗೆ ಸಂಬಂಧಿಸಿದ ಯಾವುದೇ ಅರ್ಜಿಯನ್ನು ದೂತಾವಾಸದ ವೆಬ್ ಸೈಟ್ ಮೂಲಕ ಸಲ್ಲಿಸಬೇಕು, ಹೊಸ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದರ ಜೊತೆಗೆ ನವೀಕರಿಸುವುದಕ್ಕಾಗಿಯೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೊಸ ವ್ಯವಸ್ಥೆಯು ಪಾಸ್ಪೋರ್ಟ್-ಸಂಬಂಧಿತ ಸೇವೆಗಳ ವೇಗವನ್ನು ದೋಷರಹಿತವಾಗಿ ನಿರ್ವಹಿಸಲು ಅನುವಾಗಲಿದೆ ಎಂದು ರಾಯಭಾರಿ ಹೇಳಿದರು.
ಹೊಸ ಯೊಜನೆಯಲ್ಲಿ ಆರು ಅರ್ಜಿದಾರರ ಪಾಸ್ ಪೋರ್ಟ್ ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವ ಹಳೆಯ ವಿಧಾನವು ಮಾರ್ಚ್ 10 ರವರೆಗೆ ಮಾತ್ರ ಮುಂದುವರಿಯಲಿದೆ. ಭಾರತೀಯ ಪಾಸ್‌ಪೋರ್ಟ್ ಸೇವಾ ಯೋಜನೆಯನ್ನು ವಿವಿಧ ದೇಶಗಳ ರಾಯಭಾರಿಗಳಿಗೆ ವಿಸ್ತೃತಗೊಳಿಸುವ ಹಿನ್ನೆಲೆಯಲ್ಲಿ ಒಮಾನ್‌ನಲ್ಲೂ ಆನ್ ಲೈನ್ ನಲ್ಲಿ ಪಾಸ್‌ಪೋರ್ಟ್ ಸೇವೆಗಳನ್ನು ಪ್ರಾರಂಭಿಸಲಾಗಿದೆ.