ಜಿದ್ದಾ: ಸೌದಿ ಅರೇಬಿಯಾದಲ್ಲಿ ವಿದೇಶೀ ಕಾರ್ಮಿಕರಿಗೆ ವಿಧಿಸಲಾದ ಲೆವಿಯಲ್ಲಿನ ವಿನಾಯಿತಿಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಫೆ.19 ರಿಂದ ಅಪ್ಲಿಕೇಶನ್ ಸ್ವೀಕರಿಸಲಾಗುತ್ತಿದ್ದು, ದೇಶೀಕರಣ ಕಾನೂನು ವಿಧಾನವನ್ನು ಜಾರಿಗೆ ತಂದ ಪ್ಲ್ಯಾಟಿನಮ್, ಹಸಿರು ವಿಭಾಗಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚಿನ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ಲೆವಿ ಬಾಕಿಯಲ್ಲಿ ವಿನಾಯಿತಿ ಲಭಿಸಲಿದೆ.
ಸೌದಿಯಲ್ಲಿ ವಿದೇಶೀಯರಿಗೆ, ನಿರ್ದಿಷ್ಟ ಸಂಖ್ಯೆಯನ್ನು ಲೆವಿಯಾಗಿ ವಿಧಿಸಲಾಗುತ್ತಿದ್ದು, ಕಾರ್ಮಿಕ ಸಚಿವಾಲಯ ಬಾಕಿ ಮೊತ್ತವನ್ನು ಪಾವತಿಸುವಂತೆ ಆಜ್ಞಾಪನೆ ಹೊರಡಿಸಿತ್ತು. ಹಾಗೆ ಪಾವತಿಸಿದವರು ಹಣವನ್ನು ಮರಳಿ ಪಡೆಯಲಿದ್ದಾರೆ.ಹಣ ಪಾವತಿಸದವರಿಗೆ ಬಾಕಿ ಮೊತ್ತದಲ್ಲಿ ವಿನಾಯಿತಿ ಲಭಿಸಲಿದೆ.
ಮೊದಲ ಹಂತದಲ್ಲಿ, ಪ್ಲ್ಯಾಟಿನಮ್ ಮತ್ತು ಗ್ರೀನ್ ವಿಭಾಗದ ಸಂಸ್ಥೆಗಳಿಗೆ ಈ ವಿನಾಯಿತಿ ಲಭಿಸಲಿದ್ದು, ಈ ವಿಭಾಗದಲ್ಲಿ ಮೂರು ಲಕ್ಷದ ಹದಿನಾರು ಸಾವಿರ ಸಂಸ್ಥೆಗಳಿವೆ. ಹಳದಿ ಮತ್ತು ಕೆಂಪು ವರ್ಗದಲ್ಲಿರುವ ಕಂಪನಿಗಳಿಗೂ ಈ ವಿನಾಯಿತಿ ಲಭಿಸಲಿದೆ.
ಸಚಿವಾಲಯವು ಈ ಬಗ್ಗೆ ಷರತ್ತುಗಳನ್ನು ಸ್ಪಷ್ಟಪಡಿಸಿದ್ದು, ಕಾರ್ಮಿಕ ಸಚಿವಾಲಯವು ಈ ಬಗ್ಗೆ ವಿವರಿಸುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಕಾರ್ಮಿಕ ಸಚಿವಾಲಯದ ವೆಬ್ ಸೈಟ್‌ನಲ್ಲಿ ವಿವರಗಳು ಲಭ್ಯವಿದೆ.