ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ವತಿಯಿಂದ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮವು ನಾವೂರು ಗ್ರೀನ್ ವ್ಯೂ ಶಾಲೆಯ ಸಮೀಪ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಐದರೂಸೀ ಕಿಲ್ಲೂರ್ ತಂಙಳ್ ರವರು ದುಆಶೀರ್ವಚನ ನೀಡಿ ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನರವರು ಮುಖ್ಯ ಪ್ರಭಾಷಣಗೈದರು. ಡಿವಿಷನ್ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲುರವರ ಅಧ್ಯಕ್ಷತೆಯಲ್ಲಿ ಸುಳ್ಯ ತಾಲೂಕು ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಕುಂಞಕೋಯ ತಂಙಳ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಬ್ದುಲ್ಲತೀಫ್ ಸಖಾಫಿ ಮಾಡನ್ನೂರು, ಅಬ್ದುಲ್ಲತೀಫ್ ಸಖಾಫಿ ಗೂನಡ್ಕ, ಉಮ್ಮರ್ ಮುಸ್ಲಿಯಾರ್ ಮರ್ದಾಳ, ಝುಬೈರ್ ಸಖಾಫಿ ಗಟ್ಟಮನೆ, ಅಬೂಬಕರ್ ಹಿಮಮಿ ವಿಟ್ಲ, ಅಬ್ದುಲ್ ಹಮೀದ್ ಬೀಜಕೊಚ್ಚಿ,ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಆದಂ ಹಾಜಿ ಕಮ್ಮಾಡಿ, ಇಸ್ಮಾಯಿಲ್ ಹಾಜಿ, ಲತೀಫ್ ಹರ್ಲಡ್ಕ, ಹಮೀದ್ ಸುಣ್ಣಮೂಲೆ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಡಿವಿಷನ್ ಪ್ರ.ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ಸ್ವಾಗತಿಸಿ, ಫೈಝಲ್ ಝುಹ್ರಿ ವಂದಿಸಿದರು.