janadhvani

Kannada Online News Paper

ಬಜೆಟ್‌ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಅಡ್ಡಿ

ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೂ ಮುನ್ನ ಜಂಟಿ ಸಧನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುತ್ತಿದ್ದ ವೇಳೆ  ಸದನದ  ಬಾವಿಗಿಳಿದು ‘ಬಹುಮತವಿಲ್ಲದ ಸರ್ಕಾರದಿಂದ ಬಜೆಟ್‌ ಅಧಿವೇಶನ’ ಎಂಬ ಘೋಷಣೆಗಳನ್ನು ಕೂಗಿದ ಬಿಜೆಪಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು.

ಬಿಜೆಪಿ ಶಾಸಕರು ಘೋಷಣೆ ಕೂಗುತ್ತಾ ಸದನದ ಬಾವಿಗೆ ಬಂದಾಗ  ರಾಜ್ಯಪಾಲ ವಾಜುಬಾಯಿ ವಾಲಾ ಪೂರ್ಣ ಭಾಷಣವನ್ನು ಓದದೆ 22 ಪುಟಗಳ ಪೈಕಿ ಕೇವಲ 2 ಪುಟಗಳನ್ನು ಮಾತ್ರ ಓದಿದರು.ಈ ಹಿಂದೆ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ ಎಂದು  ಹೇಳಿದ್ದ  ಯಡ್ಡಿಯೂರಪ್ಪ ಮಾತ್ರ ಇಂದು ತಮ್ಮ ಸದಸ್ಯರ ಜೊತೆಗೆ ಪ್ರತಿಭಟನೆಗೆ ಸಾಥ್ ನೀಡಿದರು. ‘ಸಮ್ಮಿಶ್ರ ಸರ್ಕಾರವು ರಾಜ್ಯಪಾಲರಿಂದ ಸುಳ್ಳುಗಳ ರಾಶಿಯನ್ನೇ ಓದಿಸುತ್ತಿದೆ. ಎಲ್ಲಿದೆ ಸರ್ಕಾರ’ ಎಂದು ಪ್ರಶ್ನಿಸಿದರು. ಇದರೊಂದಿಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ರಾಜ್ಯಪಾಲರು ಮನವಿ ಮಾಡಿಕೊಂಡರೂ ಬಿಜೆಪಿ ನಾಯಕರು ಕಿವಿಗೊಡಲಿಲ್ಲ.

ಕಾಂಗ್ರೆಸ್-ಜೆಡಿಎಸ್ ನ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಸದಸ್ಯರು ಬಜೆಟ್ ಅಧಿವೇಶನಕ್ಕೆ ಅಡ್ಡಿ ಮಾಡಲಿದ್ದಾರೆ ಎನ್ನುವ ಆತಂಕ ಇತ್ತು ಆದರೆ ಅವರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡುವ ನಿರೀಕ್ಷೆ ಯಾವುದು ಇರಲಿಲ್ಲ.ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆ ಸದನದ ಭಾವಿಗಿಳಿದಾಗ ಆಡಳಿತ ಪಕ್ಷದ ಸದಸ್ಯರು ಒಂದು ಕ್ಷಣ ವಿಚಲಿತರಾಗಿದ್ದು ಕಂಡು ಬಂತು. 
ಫೆಬ್ರುವರಿ 08ರಂದು(ಶುಕ್ರವಾರ) ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ ಮಂಡನೆಯಾಗಲಿದೆ.

error: Content is protected !! Not allowed copy content from janadhvani.com