ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ 2019-2021 ನೇ ಸಾಲಿನ ಸದಸ್ಯತ್ವ ಅಭಿಯಾನಕ್ಕೆ ಫೆಬ್ರುವರಿ 01ರಂದು ದಮ್ಮಾಮ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಉಸ್ತಾದರು ದಮ್ಮಾಮ್ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಸಂಘ ಸಂಸ್ಥೆಗಳ ನೇತಾರರಾದ ಇಝ್ಝುದ್ದೀನ್ ಮುಸ್ಲಿಯಾರ್ ರವರಿಗೆ ಸದಸ್ಯತ್ವ ಫೋರ್ಮ್ ನೀಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಜೊ.ಕಾರ್ಯದರ್ಶಿ ಫೈಸಲ್ ಕೃಷ್ಣಾಪುರ, ರಾಷ್ಟ್ರೀಯ ಸಮಿತಿ ನೇತಾರರುಗಳಾದ ಅಝೀಝ್ ಸಅದಿ, ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ, ಹನೀಫ್ ಮಂಜನಾಡಿ ದಮ್ಮಾಮ್ ಝೋನಲ್ ಕಾರ್ಯಕರ್ತರಾದ ಶಿಹಾಬುದ್ದೀನ್ ಸಖಾಫಿ, ಹಬೀಬ್ ಸಖಾಫಿ ಹಾಗೂ ಇನ್ನಿತರ ನೇತಾರರುಗಳು ಭಾಗಿಯಾಗಿದ್ದರು.
ಮದೀನಾ ಝೋನಲ್ ಮಟ್ಟದಲ್ಲಿ ಚಾಲನೆ
ಫೆಬ್ರವರಿ 01 ರಂದು ಕೆಸಿಎಫ್ ಭವನ ತಬೂಕಿನಲ್ಲಿ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಮಂಜೇಶ್ವರ ಅವರಿಗೆ ಐಸಿಎಫ್ ತಬೂಕ್ ಇದರ ಕಾರ್ಯದರ್ಶಿ ಅಹ್ಮದ್ ಕುಟ್ಟಿ ಮುಸ್ಲಿಯಾರ್ ರವರು ಸದಸ್ಯತ್ವದ ಫೋರ್ಮ್ ನೀಡುವ ಮೂಲಕ ಮದೀನಾ ಝೋನಲ್ ಮಟ್ಟದ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಸಿಎಫ್ ನ್ಯಾಷನಲ್ ಎಕ್ಸಿಕ್ಯೂಟಿವ್ ಸದಸ್ಯರಾದ ಹಮೀದ್ ಮುಸ್ಲಿಯಾರ್, ಝೋನಲ್ ಎಕ್ಸಿಕ್ಯೂಟಿವ್ ಸದಸ್ಯರಾದ ಹೈದೆರ್ ಪಡಿಕ್ಕಲ್, ಸೆಕ್ಟರ್ ನಿರ್ದೇಶಕರಾದ ಯಾಕೂಬ್ ಬನಾರಿ, ಕೋಶಾಧಿಕಾರಿ ಉಮರ್ ವಳಚ್ಚಿಲ್, ತಬೂಕ್ ಸೆಕ್ಟರಿನ ಎಲ್ಲಾ ಕಾರ್ಯಕಾರಿ ಸದಸ್ಯರು, ತಬೂಕ್ ಐಸಿಎಫ್ ನ ನೇತಾರರಾದ, ಹಮೀದ್ ಸಅದಿ, ಹಾಗೂ ಅಬೂಬಕ್ಕರ್ ಸಖಾಫಿ ಉಪಸ್ಥಿತರಿದ್ದರು.
ಜಿದ್ದಾ ಝೋನಲ್ ಮಟ್ಟದಲ್ಲಿ ಚಾಲನೆ
ಫೆಬ್ರುವರಿ 01ರಂದು ಜಿದ್ದಾದ ಸಯ್ಯಿದ್ ನಿವಾಸದಲ್ಲಿ ಸಯ್ಯಿದ್ ಮುಹಮ್ಮದ್ ಅಲ್-ಬುಖಾರಿ ಉಚ್ಚಿಲ ತಂಙಳ್ ರವರ ಪುಣ್ಯಹಸ್ತದಿಂದ ಝೋನಲ್ ಅಧ್ಯಕ್ಷರಾದ ಬಹು ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರಿಗೆ ಸದಸ್ಯತ್ವ ಫೋರ್ಮ್ ನೀಡುವ ಮೂಲಕ ಜಿದ್ದಾ ಝೋನಲ್ ಮಟ್ಟದಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಚ್ಚಿಲ ತಂಙಳ್, ಸಯ್ಯಿದ್ ಝಕರಿಯ್ಯಾ ಸಖಾಫಿ ನಾವುಂದ, ಝೋನಲ್ ಪ್ರ. ಕಾರ್ಯದರ್ಶಿ ಇಬ್ರಾಹಿಮ್ ಕಿನ್ಯಾ, ಹಿರಿಯ ನೇತಾರರುಗಳಾದ ಸಿದ್ದೀಕ್ ಬಾಳೆಹೊನ್ನೂರು, ಶಾಹುಲ್ ಹಮೀದ್ ಸಾಗರ, ಅಬ್ಬಾಸ್ ಹಾಜಿ ಹಾಗೂ ಶರಫಿಯ್ಯಾ ಬವಾದಿ ನೇತಾರರೂ ಭಾಗಿಯಾಗಿದ್ದರು.
ದಮ್ಮಾಮ್ ಝೋನಲ್ ಮಟ್ಟದಲ್ಲಿ ಚಾಲನೆ
ಫೆಬ್ರವರಿ 01ರಂದು ರಾಷ್ಟ್ರೀಯ ಸಮಿತಿ ಪ್ರ. ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ರವರು ಝೋನಲ್ ಅಧ್ಯಕ್ಷರಾದ ಬಹು ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ರವರಿಗೆ ಸದಸ್ಯತ್ವ ಫಾರ್ಮ್ ನೀಡಿ ಝೋನಲ್ ಮಟ್ಟದಲ್ಲಿ ಚಾಲನೆ ನೀಡಿದರು.
ರಿಯಾದ್ ಝೋನಲ್ ಮಟ್ಟದಲ್ಲಿ ಚಾಲನೆ
ಫೆಬ್ರುವರಿ 01ರಂದು ಝೋನಲ್ ಹಿರಿಯ ಸದಸ್ಯರಾದ ಸಿತಾರ್ ಮುಹಮ್ಮದ್ ಹಾಜಿಯವರಿಗೆ ಸದಸ್ಯತ್ವ ಫೋರ್ಮ್ ನೀಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭ ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ, ಝೋನ್ ಪ್ರ. ಕಾರ್ಯದರ್ಶಿ ಬಶೀರ್ ತಲಪಾಡಿ, ಕೋಶಾಧಿಕಾರಿ ಇಸ್ಮಾಯಿಲ್ ಕನ್ನಂಗಾರ್ ಸಹಿತ ಹಲವು ನಾಯಕರು ಉಪಸ್ಥಿತರಿದ್ದರು.
ಅಲ್ ಗಸೀಮ್ ಝೋನಲ್ ಮಟ್ಟದಲ್ಲಿ ಚಾಲನೆ
ಫೆಬ್ರುವರಿ 01ರಂದು ಬುರೈದ ಕೆಸಿಎಫ್ ಹಾಲಿನಲ್ಲಿ ಪ್ರಥಮವಾಗಿ ಝೋನಲ್ ಅಡ್ಮಿನ್ ವಿಂಗ್ ಚೇರ್ಮನ್ ಅಬ್ದುಲ್ ಕರೀಂ ಉಸ್ತಾದರು ಹಿರಿಯ ಸದಸ್ಯರಾದ ಅಬ್ದುಲ್ ರಝಕ್ ಸಜಿಪ ಅವರಿಗೆ ಸದಸ್ಯತ್ವ ಫೋರ್ಮ್ ನೀಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಝೋನ್ ಕಾರ್ಯದರ್ಶಿ ಸಾಲಿ ಬೆಳ್ಳಾರೆ , ಮರ್ಕಝುಲ್ ಹುದಾ ಕುಂಬ್ರ ಇದರ ರಿಸೀವರ್ ಷರೀಫ್ ಅಮಾನಿ ಉಸ್ತಾದ್,
ಅಲ್ ಗಸೀಮ್ ಝೋನ್, ಬುರೈದ ಸೆಕ್ಟರ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.