ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಕೇಂದ್ರದ ಎನ್‌ಡಿಎ ಸರ್ಕಾರ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಿದ್ದು, ಮಂಡನೆ ಮುಗಿದ ಕೆಲವೇ ಗಂಟೆಗಳಲ್ಲಿ ಮಧ್ಯಂತರ ಬಜೆಟ್ ವಿರೋಧಿಸಿ ಸುಪ್ರೀಂಗೆ ಅರ್ಜಿ ದಾಖಲಾಗಿದೆ.
ನ್ಯಾಯವಾದಿ ಮನೋಹರ ಲಾಲ್ ಶರ್ಮಾ ದೂರು ಸಲ್ಲಿಸಿದ್ದು, ಸಂವಿಧಾನದಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡನೆಗೆ ಮಾತ್ರ ಅವಕಾಶವಿದ್ದು, ಇದಕ್ಕೆ ಧ್ವನಿಮತದ ಒಪ್ಪಿಗೆ ಪಡೆಯಬೇಕು. ಚುನಾವಣೆ ನಂತರ ಬಂದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಅವಕಾಶವಿದೆ.
ಆದರೆ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಮಧ್ಯಂತರ ಬಜೆಟ್ ಮಂಡನೆ ಅಸಂವಿಧಾನಿಕವಾಗಿದ್ದು ಅದನ್ನು ವಜಾಗೊಳಿಸಬೇಕು. ಈಗ ಸೀಮಿತ ಅವಧಿಯ ಸರ್ಕಾರವಿದ್ದು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ದೂರಿದ್ದಾರೆ