ರಿಯಾದ್: ವಿದೇಶಿ ಕಾರ್ಮಿಕರಿಗೆ ವಿಧಿಸಲಾದ ಲೆವಿ ಪಾವತಿಸಲು ಹೆಚ್ಚು ಸಮಯಾವಕಾಶ ನೀಡುವಂತೆ ಸೌದಿ ಅರೇಬಿಯಾದ ಸಣ್ಣ ಉದ್ಯಮಗಳು ಒತ್ತಾಯಿಸಿದೆ. ವ್ಯಾಪಾರದಲ್ಲಿನ ಮಂದಗತಿಯು ಕಂಪೆನಿಗಳ ಮೇಲೆ ಪ್ರಭಾವ ಬೀರಿದೆ. ಈ ಸನ್ನಿವೇಶದಲ್ಲಿ, ದೊಡ್ಡ ಮಟ್ಟದ ಲೆವಿ ಪಾವತಿಸುವುದಕ್ಕೆ ಸಮಯಾವಕಾಶ ನೀಡಬೇಕು ಎಂಬುದು ಅವರ ಬೇಡಿಕೆಯಾಗಿದೆ.
ವಿದೇಶಿ ಕೆಲಸಗಾರರ ಲೆವಿ ಪಾವತಿಸುವುದಕ್ಕೆ ಮಾಲಿಕರು ಜವಾಬ್ದಾರರಾಗಿರುತ್ತಾರೆ. ಹೆಚ್ಚಿನ ಕಾರ್ಮಿಕರಿರುವ ಕಂಪನಿಗಳಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದ ಕಾರಣ ಲೆವಿ ಪಾವತಿಸಲು ಸಮಯ ಅವಕಾಶ ನೀಡಲಾಗಿತ್ತು.ಗಡುವು ಮುಗಿದ ಕಾರಣ ಹೆಚ್ಚಿನ ಸಮಯಾವಕಾಶವನ್ನು ವ್ಯಾಪಾರಿಗಳು ಕೋರಿದ್ದಾರೆ. ಆರ್ಥಿಕ ಹೊರೆ ಕಾರಣದಿಂದ ಹಲವಾರು ಸಂಸ್ಥೆಗಳನ್ನು ಮುಚ್ಚಲಾಗಿದೆ.
ಮಾರುಕಟ್ಟೆಯಲ್ಲಿನ ಕುಸಿತವನ್ನು ಪರಿಗಣಿಸಿ ಲೆವಿ ಪಾವತಿಸಲು ಹೆಚ್ಚು ಸಮಯಾವಕಾಶವನ್ನು ನೀಡುವಂತೆ ಉದ್ಯೋಗದಾತರು ಒತ್ತಾಯಿಸಿದ್ದಾರೆ. ಪರಿಷ್ಕೃತ ಲೆವಿ ಸಂಖ್ಯೆಯು ಕಳೆದ ಜನವರಿ 1 ರಿಂದ ಜಾರಿಗೆ ಬಂದಿತ್ತು,ಸ್ಥಳೀಯರಿಗಿಂತ ಹೆಚ್ಚಿನ ವಿದೇಶಿಗರಿರುವ ಸಂಸ್ಥೆಗಳಿಗೆ ಈ ವರ್ಷದಿಂದ ಪ್ರತಿ ವಿದೇಶಿ ಕೆಲಸಗಾರರಿಗೆ 600 ರಿಯಾಲ್ ಲೆವಿ ನೀಡಬೇಕಾಗುತ್ತದೆ.