janadhvani

Kannada Online News Paper

ಅಲ್ ಮದೀನಾ ಸಿಲ್ವರ್ ಜುಬಿಲಿ ಮಹಾ ಸಮ್ಮೇಳನಕ್ಕೆ ಅದ್ದೂರಿ ಚಾಲನೆ- ಫೆ.3ಕ್ಕೆ ಸಮಾರೋಪ

ಮಂಜನಾಡಿ: “ಇಸ್ಲಾಮ್ ಧರ್ಮವನ್ನು ವಿರೋಧಿಸಲು ನಾಸ್ತಿಕವಾದಿಗಳು ಹಲವು ನಾಮದಲ್ಲಿ ಪ್ರತ್ಯಕ್ಷಗೊಳ್ಳುತ್ತಿದ್ದು, ತನ್ನ ಯುಕ್ತಿಗೆ ನಿಲುಕದನ್ನು ಧಿಕ್ಕರಿಸಿ, ಅಲ್ಲಾಹು ಇಲ್ಲವೆಂಬ ಆಶಯವನ್ನು ಜನರೆಡೆಯಲ್ಲಿ ಹರಡಲು ಶ್ರಮಿಸುತ್ತಾರೆ, ಅಂತಹವರ ವಂಚನೆಗೆ ಯಾರು ಮಾರು ಹೋಗದಿರಿ” ಎಂದು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಹೇಳಿದರು.ಅವರು ದಕ್ಷಿಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಲೌಕಿಕ ವಿದ್ಯಾಕೇಂದ್ರ, ಕರುನಾಡ ಮರ್ಕಝ್ ಎಂದೇ ಖ್ಯಾತಿ ಹೊಂದಿದ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಬೆಳ್ಳಿಹಬ್ಬ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಜಾಗತಿಕ ಮಟ್ಟದಲ್ಲಿ ಬಲುದೊಡ್ಡ ಸವಾಲಾಗಿ ಪರಿಣಮಿಸಿರುವ ಉಗ್ರ ಚಟುವಟಿಕೆಯು ಇಸ್ಲಾಂ ಧರ್ಮಕ್ಕೆ ಅನ್ಯವಾಗಿದೆ.ಪ್ರವಾದಿ (ಸ.ಅ)ರ ಜೀವನ ಶೈಲಿಯನ್ನು ಅರಿತರೆ ಯಾವೊಬ್ಬನಿಗೂ ಉಗ್ರವಾದಿಯಾಗಲು ಸಾಧ್ಯವಿಲ್ಲ ಎಂದರು.

ಫೆಬ್ರವರಿ 1 , 2, 3 ದಿನಾಂಕಗಳಲ್ಲಿ ಸಿಲ್ವರ್ ಜುಬಿಲಿ ಮಹಾ ಸಮ್ಮೇಳನ ನಡೆಯಲಿದ್ದು,ಬಹು: ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಸಯ್ಯಿದ್ ಅತಾವುಲ್ಲಾಹ್ ತಂಙಳ್ ಉದ್ಘಾಟಿಸಿದರು. ಹುಸೈನ್ ಸಅದಿ ಕೆ.ಸಿ.ರೋಡ್, ಕಾಡಾಚಿರ ಉಸ್ತಾದ್,ಡಾ.ಎಮ್ಮಸ್ಸೆಂ ಝೈನಿ ಕಾಮಿಲ್,ಜನಾಬ್ ಕಣಚೂರು ಮೋನು ಹಾಜಿ,ರಾಜ್ಯ ಜನತಾದಳ ಕಾರ್ಯದರ್ಶಿ ಜನಾಬ್ ಬಿ.ಎಂ.ಫಾರೂಖ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ದುಆ ಆಶೀರ್ವಚನ ನೀಡಿದರು.

ಪ್ರಾರಂಭದಲ್ಲಿ ಅಲ್ ಮದೀನಾ ಯತೀಂಖಾನದಲ್ಲಿ ಕಲಿತು ಇದೀಗ ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದರ್ರಝಾಖ್ ಅವರ ನಿಕಾಹ್ ನಡೆಸಲಾಯ್ತು.

ಫೆಬ್ರವರಿ 02 ರಂದು 25 ಜೋಡಿಗಳ ಸಾಮೂಹಿಕ ವಿವಾಹ ಹಾಗೂ ಫೆಬ್ರವರಿ 03 ರಂದು ಸಮಾರೋಪ :
ಸಮ್ಮೇಳನದ ಸಮಾರೋಪವು ಫೆಬ್ರವರಿ 03 ರಂದು ಆದಿತ್ಯವಾರ ನಡೆಯಲಿದ್ದು ಸಮಸ್ತ ಅಧ್ಯಕ್ಷ ರಈಸುಲ್ ಉಲಮಾ ಶೈಖುನಾ ಸುಲೈಮಾನ್ ಉಸ್ತಾದ್ ನೇತ್ರತ್ವ ನೀಡಲಿದ್ದಾರೆ. ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಸನದುದಾನ ಪ್ರಭಾಷಣ ಹಾಗೂ ಸುನ್ನೀ ಆದರ್ಶ ನಾಯಕ SYS ಕೇರಳ ರಾಜ್ಯಾಧ್ಯಕ್ಷ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

error: Content is protected !! Not allowed copy content from janadhvani.com