ಜುಬೈಲ್: ಜಾತಿ ಧರ್ಮಗಳ ಭೇದವಿಲ್ಲದೆ ರೋಗಿಗಳಿಗೆ ಬೇಕಾದ ರಕ್ತದ ಅವಶ್ಯಕತೆಯನ್ನು ಪೂರೈಸಲು ಅಹರ್ನಿಶಿ ದುಡಿಯುತ್ತಿರುವ ಬ್ಲಡ್ ಡೋನರ್ಸ್ ಮಂಗಳೂರು ಎಂಬ ಸಂಸ್ಥೆಗಳ ಲೋಗೊ ಇರುವ ಕ್ರಿಕೆಟ್ ತಂಡ ಜೆರ್ಸಿಯನ್ನು ಇತ್ತೀಚೆಗೆ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಬಿಡುಗಡೆಗೊಳಿಸಲಾಯಿತು.
ಸೌದಿ ಅರೇಬಿಯಾದ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ಮೂಲದ ಯುವಕರು ತಮ್ಮ ಬಿಡುವಿಲ್ಲದ ನೌಕರಿಯ ನಡುವೆಯೂ ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ಸಕಾಲ ರಕ್ತ ಪೂರೈಸುವ ಸಲುವಾಗಿ ಅಲ್ಲಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಸಮಾಜ ಮುಖಿಯಾಗಿರುವ ಈ ಯುವಕರು ತಮ್ಮ ದಣಿವನ್ನು ಅಪರೂಪಕ್ಕೊಮ್ಮೆ ಸಿಗುವ ಸಮಯವನ್ನು ಕ್ರಿಕೆಟ್ ಆಡಿ ನೀಗಿಸಿಕೊಳ್ಳುತ್ತಿದ್ದಾರೆ.
ಇದೀಗ ಒಂದು ಹೆಜ್ಜೆ ಮುಂದೆ ಸಾಗುತ್ತ ತಾವು ಆಡುವ ತಂಡಕ್ಕೆ ಹೊಸ ಜೆರ್ಸಿಯನ್ನು ಸಿದ್ದ ಪಡಿಸಿ ಅದರಲ್ಲಿ ಬ್ಲಡ್ಡ್ ಡೋನರ್ಸ್ ಮಂಗಳೂರು ಸಮಾಜ ಸೇವೆ ಸಂಸ್ಥೆಯ ಲೋಗೊವನ್ನೂ ಕೂಡಾ ಬಳಸಿದ್ದಾರೆ. ಈ ಸಂಸ್ಥೆಗಳ ಲೋಗೊ ಇರುವ ಜೆರ್ಸಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸುತ್ತಾ ಸಮಾಜ ಸೇವೆಗಾಗಿ ಎಲ್ಲರೂ ಕೈ ಜೊಡಿಸಿರಿ ಎಂಬ ಸಂದೇಶ ಸಾರಿದ್ದಾರೆ.
ಕರಾವಳಿಯಲ್ಲಿ ಮುಂಚೂಣಿಯಲ್ಲಿರುವ ಇಂತಹ ಸಮಾಜಮುಖಿ ಸಂಘಸಂಸ್ಥೆಗಳ ಲೊಗೊ ಹಾಕಿ ನೆರೆದಂತಹ ಯುವಕರಿಗೆ ಮಾದರಿಯಾಗಿ ಇಂತಹ ಸಮಾಜಸೇವೆಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು.ಈ ತಂಡದ ಜರ್ಸಿಗೆ ಪ್ರಾಯೋಜಕರಾಗಿ
BHARCO – FASTEC – TEAM ZIGZAG
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಥಿಕ್ ಅಹ್ಮದ್ ವಹಿಸಿಕೊಂಡರೆ ಸಾಮಾಜಿಕ ಸಂಸ್ಥೆಗಳ ಬಗ್ಗೆ ಅರಿವನ್ನು ನೌಫಲ್ ಬಜ್ಪೆ ತಿಳಿಸಿಕೊಟ್ಟರು.
ಅನೀಷ್ ಕುಕ್ಕಾಡಿ ವಂದನಾರ್ಪಣೆ ಮತ್ತು ಸುಲ್ತಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಝಾಹಿದ್ ಇಸ್ಮಾಯಿಲ್,ಅರ್ಷಕ್ ಇಸ್ಮಾಯಿಲ್,ಶಫಿಕ್ ಕರಂಬಾರ್,ಹಮೀದ್ ಕಾರ್ಕಳ,ನೌಶದ್ ಉಪಸ್ಥಿತರಿದ್ದರು.
ಮಾಧ್ಯಮ ವಿಭಾಗ
ಬ್ಲಡ್ ಡೊನರ್ಸ್ ಮಂಗಳೂರು(ರಿ)