ಅಬುಧಾಬಿ: ಫೆಬ್ರವರಿ 4 ರಿಂದ ಎಮಿರೇಟ್ಸ್ ವಿಮಾನದಲ್ಲಿ ಸರಕು ಸಾಗಾಟದ ಮಿತಿಯಲ್ಲಿ 5 ಕಿ.ಗ್ರಾಂ.ನಷ್ಟು ಕಡಿತಗೊಳಿಸಲಿದೆ. ಕಡಿಮೆ ದರದಲ್ಲಿ ಟಿಕೆಟ್ ಖರೀದಿ ಮಾಡುವವರಿಗೆ ಉಚಿತ ಬ್ಯಾಗೇಜ್ ಮಿತಿಯನ್ನು ಕಡಿತಗೊಳಿಸಲಾಗುತ್ತಿದೆ.
ಎಕಾನಮಿ ದರಜೆಯಲ್ಲೇ ಹೆಚ್ಚಿನ ದರ ನೀಡಿ ಟಿಕೇಟ್ ಖರೀದಿಸಿದ ಯಾತ್ರಿಕರ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಎಕಾನಮಿಯಲ್ಲಿ ನಾಲ್ಕು ವರ್ಗಗಳಾಗಿ ಪರಿವರ್ತಿಸಲಾಗಿದ್ದು, ಸ್ಪೆಷಲ್, ಸೇವರ್, ಫ್ಲಕ್ಸ್ ಮತ್ತು ಫ್ಲಕ್ಸ್ ಪ್ಲಸ್ ಎಂಬುದಾಗಿ ವಿಂಗಡಿಸಲಾಗಿದೆ. ಫೆಬ್ರವರಿ 4 ರಿಂದ 15 ಕೆ.ಜಿ. ಉಚಿತ ಬ್ಯಾಗೇಜ್ ಮಿತಿಯಾಗಿದೆ.
ಸೇವರ್ ವಿಭಾಗದಲ್ಲಿ 25, ಪ್ಲಕ್ಸ್ 30 ಮತ್ತು ಫ್ಲಕ್ಸ್ ಪ್ಲಸ್ 35. ಹೀಗೆ ವಿಂಗಡಿಸಲಾಗಿದ್ದು, ಸ್ಪೆಷಲ್ ಮತ್ತು ಸೇವರ್ ವಿಭಾಗಗಳ ಪ್ರಯಾಣಿಕರಿಗೆ ಬ್ಯಾಗೇಜ್‌ನಲ್ಲಿ 5ಕೆ.ಜಿ ಕಡಿತವಾಗಲಿದೆ. ಈ ಬಗ್ಗೆ ಏರ್ಲೈನ್ ನಿಂದ ಹೊರಬಂದ ಸುತ್ತೋಲೆಗಳನ್ನು ವಿವಿಧ ಪ್ರಯಾಣ ಏಜೆನ್ಸಿಗಳಿಗೆ ವಿತರಿಸಲಾಗಿದೆ.
ಫೆಬ್ರವರಿ 4ಕ್ಕೆ ಮುಂಚಿತವಾಗಿ, ಟಿಕೆಟ್ ಪಡೆದಿರುವವರು ಹಳೆಯ ನಿಯಮಗಳ ಪ್ರಕಾರ ಸಾಮಾನು ಸರಂಜಾಮು ಸಾಗಿಸಬಹುದು. ಆದಾಗ್ಯೂ, ಯುಎಸ್ ಮತ್ತು ಯೂರೋಪ್ ವಲಯಗಳಿಗೆ ಸರಕುಗಳ ಮಿತಿಯಲ್ಲಿ ಬದಲಾವಣೆಯಿಲ್ಲ .
ಬ್ಯಾಗೇಜ್ ಮಿತಿ (ಹಳೆಯದು ಬ್ರಾಕೆಟ್‌ನಲ್ಲಿ)
ಸ್ಪೆಷಲ್: 15 (20)
ಸೇವರ್: 25 (30)
ಫ್ಲಕ್ಸ್: 30 (30)
ಫ್ಲಕ್ಸ್ ಪ್ಲಸ್: 35 (35)