ಇಡ್ಕಿದು: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಅಳಕೆಮಜಲು ಇದರ ಮಹಾಸಭೆಯು ಇತ್ತೀಚೆಗೆ ಶಾಖಾಧ್ಯಕ್ಷರಾದ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ಹಿದಾಯತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು. ಸ್ಥಳೀಯ ಖತೀಬ್ ಮುಹಮ್ಮದ್ ಶರೀಫ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು.
ಕಾರ್ಯದರ್ಶಿ ಉನೈಸ್ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ವೀಕ್ಷಕರಾಗಿ ವಿಟ್ಲ ಡಿವಿಷನ್ ಉಪಾಧ್ಯಕ್ಷರಾದ ರಹೀಮ್ ಸಖಾಫಿ ಆಗಮಿಸಿದ್ದರು. ಸಂಘಟನೆಯ ಅನಿವಾರ್ಯತೆಯ ಬಗ್ಗೆ ಸಿದ್ದೀಕ್ ಹಾಜಿ ಕಬಕ ತರಗತಿ ನಡೆಸಿದರು. ಹಾಲಿ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿ ರಚಿಸಲಾಯಿತು.
ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಹೈದರ್ ಅಳಕೆಮಜಲು, ಉಪಾಧ್ಯಕ್ಷರುಗಳಾಗಿ ನಝೀರ್ ಬಡ್ಡಂಗರೆ ಮತ್ತು ಜಾಬೀರ್ ಅಳಕೆಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಕೋಣಿಮಾರ್, ಜೊತೆ ಕಾರ್ಯದರ್ಶಿಗಳಾಗಿ ಉನೈಸ್ ಮತ್ತು ರಿಝ್ವಾನ್ ನಡುಮಜಲು, ಕೋಶಾಧಿಕಾರಿಯಾಗಿ ಬಾತಿಷ್ ಅಳಕೆಮಜಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ 15 ಮಂದಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪ್ರಮುಖರಾದ ದಾವೂದ್ ಅಶ್ರಫಿ, ಅಝ್ಹರುದ್ದೀನ್ ಫಾಳಿಲಿ, ವಿಟ್ಲ ಸೆಕ್ಟರ್ ಕಾರ್ಯದರ್ಶಿ ಸೈಫುದ್ದೀನ್ ಅಳಕೆಮಜಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮೊದಲು ಉನೈಸ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಹಾರಿಸ್ ಧನ್ಯವಾದಗೈದರು.