ದಮ್ಮಾಮ್: ಕರುನಾಡಿನ ಸುನ್ನೀ ಮುಸಲ್ಮಾನರ ಆವೇಶ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಇದರ ಅಲ್ ಅಹ್ಸಾ ಸೆಕ್ಟರ್ ವತಿಯಿಂದ ಇಂದು (14/12/18) ಜುಮಾ ನಮಾಝ್ ಬಳಿಕ ಸಅದಿಯಾ ಹಾಲ್ ಅಲ್ ಅಹ್ಸಾದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.
ಪ್ರಥಮವಾಗಿ ಸೆಕ್ಟರ್ ವತಿಯಿಂದ ಮಾಸಂಪ್ರತೀ ನಡೆಸಲ್ಪಡುವ ಮಾಸಿಕ ಸ್ವಲಾತ್ ಮಜ್ಲಿಸ್ ಸೆಕ್ಟರ್ ಅಧ್ಯಕ್ಷ ಹಬೀಬುರ್ರಹ್ಮಾನ್ ಉಸ್ತಾದರ ನೇತೃತ್ವದಲ್ಲಿ ನಡೆಯಿತು, ನಂತರ ಮಹಾತ್ಮರ ಅನುಸ್ಮರಣಾ ಸಂಗಮ ನಡೆಯಿತು.
ಅನುಸ್ಮರಣಾ ಸಂಗಮವನ್ನು ಉದ್ದೇಶಿಸಿ ಮಾತನಾಡಿದ ಸೆಕ್ಟರ್ ಅಧ್ಯಕ್ಷ ಹಬೀಬುರ್ರಹ್ಮಾನ್ ಉಸ್ತಾದ್ “ಮುಹ್ಯುದ್ದೀನ್ ಶೈಖ್ ರವರ ಜೀವನ ಸತ್ಯ ಸಂಧತೆಯಿಂದ ಕೂಡಿತ್ತು, ಪರಿಶುಧ್ಧತೆಯ ಪ್ರತೀಕ ಅವರು, ಅವರ ಜೀವನ ನಮಗೆಲ್ಲಾ ಮಾದರಿ ಎಂದು ಭಾಷಣ ಮಾಡಿದರು,
ನಂತರ ಕೆ.ಸಿ.ಎಫ್ ನಲ್ಲಿ ಸಕ್ರೀಯವಾಗಿ ದುಡಿದ ಸದಸ್ಯನಿಗೆ ಕೊಡಲಾಗುವ ಓ ಖಾಲಿದ್ ಅವಾರ್ಡನ್ನು, ಸೆಕ್ಟರಿನ ಎಲ್ಲ ಕಾರ್ಯಾಚರಣೆಯಲ್ಲಿಯೂ ಸಕ್ರೀಯವಾಗಿ ಪಾಲ್ಗೊಂಡು, ಹಜ್ಜಾಜಿಗಳ ಸೇವೆ ಮಾಡುವ ಎಚ್.ವಿ.ಸಿ, ಯಲ್ಲಿಯೂ ಸೇವೆ ಗೈದು, ಇದೀಗ ಪ್ರವಾಸಿ ಜೀವನ ಕೊನೆಗೊಳಿಸಿ ತಾಯ್ನಾಡಿಗೆ ಮರಳುತ್ತಿರುವ ಅಬ್ಬಾಸ್ ವೀರಕಂಬರವರಿಗೆ ಶಾಮಿ ಎಂಬಸ್ಸಿ ಯ ಅಬ್ದುರ್ರಹ್ಮಾನ್ ರವರು ನೀಡಿ ಗೌರವಿಸಿದರು,
ಮಾತ್ರವಲ್ಲದೆ, ಸೆಕ್ಟರ್ ಸಮೀತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನವನ್ನು ಮಾಡಲಾಯಿತು, ಕೆ.ಸಿ.ಎಫ್ ದಮ್ಮಾಮ್ ಝೋನ್ ಸದಸ್ಯ ಜಿ.ಕೆ. ಇಕ್ಬಾಲ್ ಗುಲ್ವಾಡಿ, ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಪಬ್ಲಿಷಿಂಗ್ ವಿಭಾಗ ಚಯರ್ಮೇನ್ ಅಶ್ರು ಬಜ್ಪೆ, ಕೆ.ಸಿ.ಎಫ್ ಅಲ್ ಅಹ್ಸಾ ಸೆಕ್ಟರ್ ಕಾರ್ಯದರ್ಶಿ ಕೆ.ಎಂ ಇರ್ಶಾದ್ ಪಕ್ಷಿಕೆರೆ, ಸೆಕ್ಟರ್ ಶಿಕ್ಷಣ ವಿಭಾಗ ಚಯರ್ಮೇನ್ ಇಸ್ಹಾಕ್ ಫಜೀರ್,ಸಂಘಟನಾ ವಿಭಾಗದ ಅಧ್ಯಕ್ಷ ಹಕೀಮ್ ನೆಕ್ಕರೆ, ಕೆ.ಸಿ.ಎಫ್ ಮುಬರ್ರಝ್ ಯೂನಿಟ್ ಅಧ್ಯಕ್ಷ ಅಸದುಲ್ಲಾ, ಕೆ.ಸಿ.ಎಫ್ ಹಫೂಫ್ ಈಸ್ಟ್ ಯೂನಿಟ್ ಅಧ್ಯಕ್ಷ ನಝೀರ್ ಹಯಾತ್,ಹೈದರ್ ಬಜ್ಪೆ, ಅಶ್ರಫ್ ಕಟ್ಟದಪಡ್ಪು ಉಪಸ್ಥಿತರಿದ್ದರು.