janadhvani

Kannada Online News Paper

ಯುಎಇ: ವೀಡಿಯೋ ಕರೆಗಳಿಗೆ ಹೊಸ ಮೊಬೈಲ್ ಅಪ್ಲಿಕೇಷನ್

ಅಬುಧಾಬಿ: ಯುಎಇಯಲ್ಲಿ ಅಂತರ್ಜಾಲ ಧ್ವನಿ ಮತ್ತು ವೀಡಿಯೊ ಕರೆಗಳಿಗೆ ಹೊಸ ಅಪ್ಲಿಕೇಶನ್ ಲಭ್ಯವಾಗಲಿದೆ.
Voip (ವಾಯ್ಸ್ ಓವರ್ ಐಪಿ) ಆ್ಯಪ್ ಬಳಸುವ ಇತ್ತಿಸಾಲಾತ್ ಬಳಕೆದಾರರು ಎಚ್‌ಐಯು ಮೆಸೆಂಜರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಇಂಟರ್ನೆಟ್ ಧ್ವನಿ ಮತ್ತು ವೀಡಿಯೊ ಕರೆ ಸೌಲಭ್ಯವನ್ನು ಪಡೆಯಬಹುದು.

ಸ್ಮಾರ್ಟ್ ಫೋನ್ ಗಳು, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್ ಟಾಪ್ ಗಳಲ್ಲಿ ಬಳಸ ಬಹುದಾದ ಆ್ಯಪ್ ಇದಾಗಿದೆ.

ಈ ಸೌಕರ್ಯವನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಧ್ವನಿ ಮತ್ತು ಎಚ್‌ಡಿ, ವಿಡಿಯೋ ಕರೆಗಳನ್ನು ಮಾಡಬಹುದು. ಇದು 200 ಸಂಪರ್ಕಗಳನ್ನು ಬಳಸಿ ಗುಂಪು ಚಾಟ್ ಮತ್ತು ಇನ್ಸ್ ಟೆಂಟ್ ಮೆಸೇಜಿಂಗ್ ಸೌಕರ್ಯಗಳನ್ನೂ ಒಳಗೊಂಡಿದೆ.

ಬಿಒಟಿಐಎಂ ಮತ್ತು ಸಿಎಂಇ ಇತ್ತಿಸಲಾತ್ ಪ್ಲಾಟ್ ಫಾರ್ಮ್ ನಲ್ಲಿ ಬಳಸಬಹುದಾದ ಇತರ ಅಪ್ಲಿಕೇಶನ್ ಗಳಾಗಿವೆ. ಈ ಅಪ್ಲಿಕೇಶನ್ ಗಳು ಎರಡು ವಾರಗಳ ವರೆಗೆ ಉಚಿತವಾಗಿ ಲಭ್ಯವಾಗಲಿದೆ. ಉಚಿತ ಅವಧಿಯ ನಂತರ, ಆ್ಯಪ್ ಬಳಸಲು ಹಣ ಪಾವತಿಸ ಬೇಕಾಗುತ್ತದೆ ಎಂದು ಇತ್ತಿಸಾಲಾತ್ ಹೇಳಿ ಕೊಂಡಿದೆ.

error: Content is protected !! Not allowed copy content from janadhvani.com