ಬೆಳ್ತಂಗಡಿ:ಉತ್ತೇಜಕ ಮತ್ತು ವಿನೋಧ ರೀತಿಯಲ್ಲಿ ಗಣಿತ ಪಾಠಗಳನ್ನು ಮಕ್ಕಳಲ್ಲಿ ಅಭ್ಯಸಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ +%MATH+MANIA/-= ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಮನ್-ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕ್ಯಾಂಪಸ್ ನಲ್ಲಿ ಮನ್-ಶರ್ ಗ್ರೂಪ್ ಡೈರೆಕ್ಟರ್ ಸಯ್ಯದ್ ಆಬಿದ್ ಅಸ್ಸಖಾಫ್ ಉಧ್ಘಾಟಿಸಿದರು.
ಗಣಿತ ಪಠ್ಯಪುಸ್ತಕಗಳ ವಿಷಯದಲ್ಲಿ ಗೊಂದಲಕ್ಕೀಡಾಗುವ ವಿಧ್ಯಾರ್ಥಿಗಳಲ್ಲಿ ಗಣಿತ ಪಾಠಗಳನ್ನು ಆರೋಗ್ಯಕರ ಮತ್ತು ವಿನೋಧದ ರೀತಿಯಲ್ಲಿ ಪ್ರಾಯೋಗಿಕವಾಗಿ ಪರಿಶೀಲಿಸುವ ಕಾರ್ಯಕ್ರಮವು ಇದಾಗಿದ್ದು ಗಣ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಾಧಿಕ್ ಮಾಸ್ಟರ್ ಮಲೆಬೆಟ್ಟು ಹಾಗೂ ಸಂಸ್ಥೆಯ ಅಕಾಡೆಮಿಕ್ ಡೈರಕ್ಟರ್ ವಸಂತ್ ಕುಮಾರ್ ನಿಟ್ಟೆ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಗಣಿತದ ಕುರಿತಾದ ಮಾಹಿತಿಗಳನ್ನು ಹಂಚಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು ಗಣಿತ ಸಂಬಂಧಪಟ್ಟಂತೆ ರಚಿಸಿದ ಹಾಡು,ವಿವಿಧ ಮೋಡೆಲ್ ಗಳು ,ಸ್ಕಿಟ್,ವಸ್ತು ಪ್ರದರ್ಶನ, ವಿವಿಧ ಸ್ರರ್ಧೆಗಳು ಆಕರ್ಷಣೆಯ ಕೇಂದ್ರ ಬಿಂದುವಾದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಖಲಂದರ್ ಪದ್ಮುಂಜ, ಫೈನಾನ್ಸಿಯಲ್ ಆಫೀಸರ್ ಫಾರೂಕ್,ಮನ್-ಶರ್ ಅರೆಬಿಕ್ ಮದ್ರಸದ ಫ್ರಧಾನ ಅಧ್ಯಾಪಕ ಉಸ್ಮಾನ್ ಸಖಾಫಿ,ಮನ್-ಶರ್ ಸಿಧ್ರಾ ಮುದರಿಸ್ ಹಬೀಬ್ ಸುರೈಜಿ,ಕ್ಯಾಂಪಸ್ ಉಸ್ತುವಾರಿ ರಶೀದ್ ಕುಪ್ಪೆಟ್ಟಿ ಸಂಸ್ಥೆಯ ಇಂಜಿನಿಯರ್ ಇರ್ಫಾನ್ ಪರಪ್ಪು,ಕೋರ್ಡಿನೇಟರ್ ಶಿಕ್ಷಕಿ ಉಷಾ ಭಾಗವಹಿಸಿದರು.
ಶಿಕ್ಷಕಿ ಹಬೀಬ ಹಾಗೂ ಸುಫೈರ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದು ಶಿಕ್ಷಕಿ ಅಕ್ಷತಾ ಗಣ್ಯ ಅತಿಥಿಗಳನ್ನು ಸ್ವಾಗತಿಸಿ ಶಿಕ್ಷಕಿ ಮುನಾಝ ವಂಧಿಸಿದರು.