ರಿಯಾದ್: ಸೌದಿ ಅರೇಬಿಯಾದಲ್ಲಿ ವಾಹನ ಅಪಘಾತಗಳಿಗೆ ಕಾರಣರಗುವವರಿಗೆ ನೀಡಲಾಗುವ ಶಿಕ್ಷೆಯನ್ನು ಮತ್ತಷ್ಟು ಕಠಿಣ ಗೊಳಿಸಲಾಗಿದೆ. ಅಪಘಾತ ಮತ್ತು ಆ ಮೂಲಕ ಉಂಟಾಗುವ ಸಾವು ನೋವುಗಳನ್ನು ಕಡಿಮೆ ಗೊಳಿಸುವುದು ಈ ಹೊಸ ಕಾನೂನಿನ ಗುರಿಯಾಗಿದೆ.
ಸಾವು ಮತ್ತು ಅಂಗವೈಕಲ್ಯಕ್ಕೆ ಕಾರಣರಾಗುವವರಿಗೆ ನಾಲ್ಕು ವರ್ಷಗಳ ಸೆರೆವಾಸ ಮತ್ತು 2 ಲಕ್ಷ ರಿಯಾಲ್ ವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಗಾಯಾಳು ಗುಣಮುಖರಾಗಲು ಎರಡು ವಾರಗಳು ಬೇಕಾಗುವಂತಹ ಅಪಘಾತಕ್ಕೆ ಕಾರಣರಾಗುವವರಿಗೆ ಎರಡು ವರ್ಷಗಳ ಸೆರೆವಾಸ ಮತ್ತು ಒಂದು ಲಕ್ಷ ರಿಯಾಲ್ ದಂಡ ಶಿಕ್ಷೆಗೊಳಗಾಗುತ್ತಾರೆ.
ಸೆರೆ ಹಿಡಿಯಲಾಗುವ ವಾಹನಗಳನ್ನು 90 ದಿನಗಳೊಳಗಾಗಿ ವಾಪಾಸು ಪಡೆಯಬೇಕು ಎಂಬುದು ಸೌದಿಯ ಕಾನೂನಾಗಿದೆ. ಅದಕ್ಕೆ ಮುಂದಾಗದಿದ್ದಲ್ಲಿ ವಾಹನವನ್ನು ಹರಾಜು ಮಾಡಲಾಗುವುದು ಎಂದು ರಹದಾರಿ ವಿಭಾಗವು ಹೇಳಿಕೊಂಡಿದೆ.