janadhvani

Kannada Online News Paper

ಕೆ ಸಿ ಎಫ್ ಪಂಚವಾರ್ಷಿಕೋತ್ಸವ  ಆದರ್ಶವಿವಾಹ ಹಾಗೂ ಸುನ್ನೀ ಸಂಗಮ :ಸ್ವಾಗತ ಸಮಿತಿ ರಚನೆ

ಮಂಗಳೂರು :ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಕೆಸಿಎಫ್ ಯು ಎ ಇ ರಾಷ್ಟ್ರೀಯ ಸಮಿತಿಯ ವತಿಯಿಂದ ಹತ್ತು ಜೋಡಿ ಸಾಮೂಹಿಕ ಆದರ್ಶ ವಿವಾಹ ಹಾಗೂ ಸುನ್ನೀ ಸಂಗಮವು ಡಿಸೆಂಬರ್ ತಿಂಗಳಲ್ಲಿ ಮಂಗಳೂರಲ್ಲಿ ನಡೆಯಲಿದ್ದು ಈ ಸಂಬಂಧವಾಗಿ ಕೆಸಿಎಫ್, ಎಸ್ ಎಸ್ ಎಫ್,ಎಸ್ ವೈ ಎಸ್ ಹಾಗೂ ಸುನ್ನೀ ಸಂಘ ಕುಟುಂಬಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಕೆ.ಸಿ.ಎಫ್ ಇಂಟರ್ನಾಷನಲ್ ಕೋಶಾಧಿಕಾರಿ ಹಾಜಿ ಶೈಖ್ ಬಾವ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸುನ್ನೀ ಕೋಆರ್ಡಿನೇಶನ್ ಸಮಿತಿಯ ಪ್ರ ಕಾರ್ಯದರ್ಶಿ ಬಹು ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ವಿಷಯ ಮಂಡಿಸಿ ಕೆಸಿಎಫ್ ಇವತ್ತು ಜಿಸಿಸಿಯ ಎಲ್ಲಾ ರಾಷ್ಟಗಳಲ್ಲೂ ಮತ್ತು ಮಲೇಶಿಯಾ,ಹಾಗೂ ಲಂಡನ್ ನಲ್ಲೂ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು ಅನಿವಾಸಿಯರಿಗೆ ಆಶಾಕೇಂದ್ರವಾಗಿದೆ.ಅಲ್ಲದೇ ವಿವಿಧ ರೀತಿಯ ಸಾಂತ್ವನ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದು ಇದೀಗ ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ಕೆ ಮುಂದಾಗಿದ್ದು ಪ್ರಶಂಸನೀಯವಾಗಿದೆ ಎಂದರು. ಕೆ ಸಿ ಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿ ಎಂ ಮುಹಮ್ಮದ್ ಸಖಾಫಿ, ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ,ಎಸ್ ಎಂ ಎ ರಾಜ್ಯ ಕಾರ್ಯದರ್ಶಿ ಎಂಬಿಎಂ ಸಾದಿಕ್ ಮಾಸ್ಟರ್ ಮಾತನಾಡಿದರು.ಕೆಸಿಎಫ್ ನ ನಝೀರ್ ಹಾಜಿ ಕಾಶಿಪಟ್ನ, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು ಎಸ್ ಎಸ್ ಎಫ್ ರಾಜ್ಯ ನಾಯಕರಾದ ಹಾಫಿಳ್ ಯಾಕೂಬ್ ಸಅದಿ ನಾವೂರು,ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ರಝಾಕ್ ಹಾಜಿ ನಾಟೆಕಲ್,ಸಮಾಜ ಸೇವಕ ಅಲ್ತಾಫ್ ಕುಂಪಲ, ರವೂಫ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು. ಕೆಸಿಎಫ್ ಕರ್ನಾಟಕ ಕೋಆರ್ಡಿನೇಟರ್ ಮೆಹಬೂಬ್ ಸಖಾಫಿ ಸ್ವಾಗತಿಸಿ ವಂದಿಸಿದರು.

ಸ್ವಾಗತ ಸಮಿತಿ
ಕೆಸಿಎಫ್ ಮಾಸ್ ಮಾರೇಜ್ ನಿರ್ವಹಣೆಗಾಗಿ 101 ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದ್ದು
ಸಲಹಾ ಮಂಡಳಿ
ಖಾಝಿ ಸಯ್ಯಿದ್ ಕೂರತ್ ತಂಙಲ್
ಕರ್ನಾಟಕ ಜಂಯ್ಯತುಲ್ ಉಲಮಾ ಪದಾಧಿಕಾರಿಗಳು
ಹಝ್ರತ್ ಪಾಝಿಲ್ ರಝ್ವಿ ಕಾವಲ್ಕಟ್ಟೆ
ಸಯ್ಯಿದ್ ಇಸ್ಮಾಯಿಲ್ ತಂಙಲ್
ಸಯ್ಯಿದ್ ಉಜಿರೆ ತಂಙಲ್
ಸಯ್ಯಿದ್ ಕಿಲ್ಲೂರು ತಂಙಲ್
ಹಮೀದ್ ಸಅದಿ ಅಬುಧಾಬಿ

ಡಿ ಪಿ ಯೂಸುಫ್ ಸಖಾಫಿ ಬೈತಾರ್
ಪಿಎಂಎಚ್ ಹಮೀದ್ ಅಬುಧಾಬಿ
ಜಲೀಲ್ ನಿಝಾಮಿ ದುಬಾಯಿ
ಮುಹಮ್ಮದ್ ಹಾಜಿ ಸಾಗರ್
ಬಿ ಎಂ ಮುಮ್ತಾಜ್ ಅಲಿ.

ಚೇರ್ ಮಾನ್  ಆಗಿ
ಹಾಜಿ ಶೇಖ್ ಬಾವ ಯುಎಇ
ಕಾರ್ಯದ್ಯಕ್ಷ  ರಾಗಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ
ಜನರಲ್ ಕನ್ವೀನರ್  ಆಗಿ ಹಾಜಿ ಅಬ್ದುಲ್ ರಝಾಕ್ ಅಲ್ ಐನ್
ವರ್ಕಿಂಗ್ ಕನ್ವೀನರ್  ಆಗಿ ಸಿದ್ದೀಕ್ ಸಖಾಫಿ ಮೂಳೂರು ಇವರನ್ನುಆಯ್ಕೆ ಮಾಡಲಾಯಿತು.
ವೈಸ್ ಚೇರ್ ಮಾನ್ ಗಳಾಗಿ ಜಿ ಎಂ ಮುಹಮ್ಮದ್ ಸಖಾಫಿ, ಎಂಎಸ್ಎಂ ಝೈನಿ ಕಾಮಿಲ್, ಎನ್ಕೆಎಂ ಶಾಫಿ ಸ ಅದಿ, ಕೆಕೆಎಂ ಕಾಮಿಲ್ ಸಖಾಫಿ, ಆತೂರು ಸಹದ್ ಮುಸ್ಲಿಯಾರ್, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ಹೈಸಮ್ ಶಾಕಿರ್ ಹಾಜಿ ಕಣ್ಣೂರು, ಗೋಲ್ಡನ್ ಲತೀಫ್ ಹಾಜಿ, ಯೂಸುಫ್ ಹಾಜಿ ಉಪ್ಪಳ್ಳಿ, ಮೊಯಿದೀನ್ ಹಾಜಿ ಗುಡ್ವೀಲ್, ಅಬ್ದುಲ್ ಸಲಾಂ ಕಣ್ಣೂರು ಇವರನ್ನೂ
ಉಪಸಮಿತಿಗಳ ಕನ್ವೀನರ್  ಗಳಾಗಿ ಅಬ್ದುಲ್ ರಶೀದ್ ಝೈನಿ (ಪ್ರೋಗ್ರಾಮ್) ಮಹಬೂಬ್ ಸಖಾಫಿ ಕಿನ್ಯ (ಸ್ಕ್ರೀನಿಂಗ್ )
ಅಶ್ರಫ್ ಕಿನಾರ( ಗ್ರೌಂಡ್, ಸ್ಟೇಜ್ &ಸೌಂಡ್ಸ್) ಹಾಫಿಳ್ ಯಾಕೂಬ್ ಸಅದಿ ನಾವೂರು (ಮೀಡಿಯಾ)ಸಿರಾಜುದ್ದೀನ್ ಸಖಾಫಿ ಕನ್ಯಾನ (ಪ್ರಚಾರ) ಇಸ್ಹಾಕ್ ಝುಹ್ರಿ ಸೂರಿಂಜೆ (ರಿಸೆಪ್ಷನ್)ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು (ಸ್ವಯಂಸೇವಕರು) ಅಲ್ತಾಫ್ ಕುಂಪಲ ( ಆಹಾರ)ರಹೀಂ ಸಅದಿ ಕತ್ತಾರ್,ಇಕ್ಬಾಲ್ ಕಾಜೂರು ದುಬೈ (ವಿದೇಶ ಪ್ರಚಾರ) ಮತ್ತು ಆರ್ಥಿಕ ನಿರ್ವಹಣಾ ಸಮಿತಿ ಚೇರ್ ಮಾನ್ ಆಗಿ ಇಬ್ರಾಹಿಮ್ ಬ್ರೈಟ್ ಅಬೂದಾಬಿ ಕನ್ವೀನರ್ ಆಗಿ ಮುಹಮ್ಮದಲಿ ವಳವೂರು ಇವರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com