ರಿಯಾದ್: ಸೌದಿ ಅರೇಬಿಯಾ ಮಾನಿಟರಿಂಗ್ ಏಜೆನ್ಸಿ ವರದಿಯ ಪ್ರಕಾರ ಸೌದಿ ಅರೇಬಿಯಾದಲ್ಲಿನ ವಿದೇಶೀಗಳ ಹಣ ವ್ಯವಹಾರವು ಹಿಂದಿನ ಅಂಕಿಅಂಶಗಳಿಗೆ ಹೋಲಿಸಿದರೆ ಜೂನ್ ತಿಂಗಳಿನಲ್ಲಿ 17 ಶೇಕಡಾ ಇಳಿಕೆ ಕಂಡಿದೆ.
ವರದಿಯ ಪ್ರಕಾರ, ಸೌದಿ ನಾಗರಿಕರು ವೈಯಕ್ತಿಕ ಉದ್ದೇಶಗಳಿಗಾಗಿ ವಿದೇಶಗಳಿಗೆ ಕಳುಹಿಸಿದ ಹಣದ ಪ್ರಮಾನದಲ್ಲೂ ಶೇ 42 ರಷ್ಟು ಕಡಿಮೆ ದಾಖಲಿಸಿದೆ.
ಮೇ ತಿಂಗಳಲ್ಲಿ ವಿದೇಶೀ ಕಾರ್ಮಿಕರು 1,275 ಕೋಟಿ ರಿಯಾಲ್ ತಮ್ಮ ಹುಟ್ಟೂರಿಗೆ ಕಳುಹಿಸಿದ್ದರು ಆದರೆ ಜೂನ್ ತಿಂಗಳಲ್ಲಿ ಇದು 1.06 ಕೋಟಿ ರಿಯಾಲ್‌ಗೆ ಕುಸಿದಿದೆ.
ಮೇ ತಿಂಗಳಿನಲ್ಲಿ ದೇಶೀಯರು 592 ಕೋಟಿ ರಿಯಾಲ್ ಹಣವನ್ನು ವೈಯಕ್ತಿಕವಾಗಿ ವಿದೇಶಕ್ಕೆ ಕಳುಹಿಸಿದ್ದರು. ಈ ವರ್ಷದ ಜೂನ್ನಲ್ಲಿ ಅದು 343 ಕೋಟಿ ರಿಯಾಲ್‌ಗೆ ಕುಸಿದಿರುವುದಾಗಿ ಸೌದಿ ಹಣಕಾಸು ಸಂಸ್ಥೆಯ ವರದಿಯು ತಿಳಿಸಿದೆ.
ಕಳೆದ ವರ್ಷದ ಮೊದಲಾರ್ಧದಲ್ಲಿ, ಸ್ವದೇಶಿಗಳು ವಿದೇಶಕ್ಕೆ ಕಳುಹಿಸಿದ ದರಗಿಂತ 12.3 ರಷ್ಟು ಕಡಿಮೆ ದಾಖಲಾಗಿದೆ.
ಸೌದಿ ಅರೇಬಿಯಾದ ಖಾಸಗಿ ವಲಯದಲ್ಲಿ 80 ಲಕ್ಷ ವಿದೇಶೀಯರು ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
2016 ರಲ್ಲಿ ವಿದೇಶೀಯರು 15,189 ಕೋಟಿ ರಿಯಾಲ್ ತಮ್ಮ ಹುಟ್ಟೂರಿಗೆ ಕಳುಹಿಸಿದ್ದರು.
2017 ರ ವೇಳೆಗೆ ಅದು 14,165 ಕೋಟಿ ರಿಯಾಲ್‌ಗೆ ಇಳಿದಿದೆ. ಇಂದು ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ, ವಿದೇಶಿಯರ ರೆಮಿಟೆನ್ಸ್ ಇನ್ನೂ ಕುಸಿಯುವ ಸಾಧ್ಯತೆಯಿದೆ.
ಸೌದಿ ಅರೇಬಿಯಾದಲ್ಲಿ ದೇಶೀಕರಣ ಮತ್ತು ಲೆವಿಗಳನ್ನು ಒಳಗೊಂಡ ಸುಧಾರಣೆಗಳು ಜಾರಿಗೊಳಿಸಿರುದೇ ವಿದೇಶಿ ವಿನಿಮಯ ಕಡಿತಗೊಳ್ಳಲು ಕಾರಣ ಎನ್ನಲಾಗಿದೆ.