ಉಪ್ಪಿನಂಗಡಿ,ಜು19:ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉಪ್ಪಿನಂಗಡಿ ಯುನಿಟ್ ಕ್ಯಾಂಪಸ್ ವಿಂಗ್ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಇಲ್ಲಿನ ಸುನ್ನಿ ಸೆಂಟರ್ ನಲ್ಲಿ ಚಾಲನೆ ನೀಡಲಾಯಿತು.
ಸೆಕ್ಟರ್ ಪ್ರ.ಕಾರ್ಯದರ್ಶಿ ಎಂ.ಎಂ ಮಹ್ ರೂಫ್ ಉದ್ಘಾಟಿಸುತ್ತಾ ಕ್ಯಾಂಪಸ್ ವಿದ್ಯಾರ್ಥಿ ಹಾಗೂ ಸ್ಪರ್ಧಾತ್ಮಕ ಯುಗವನ್ನು ಕುರಿತಾದಂತೆ ಅವಲೋಕನ ಮಾಡಿದರು.
ಧಾರ್ಮಿಕ ವಿಲ್ಲದ ಸಂಘಟನೆ ದೇಶಕ್ಕೂ ದೇಹಕ್ಕೂ ಮಾರಕ,ಸಂಘಟನೆಯೊಡನೆ ಧಾರ್ಮಿಕ ನಿಷ್ಠೆಯೂ ಬೆಳೆದು ಬರಬೇಕು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಸೆಸ್ಸೆಫ್ಫ್ ಜಿಲ್ಲಾ ಕಾರ್ಯದರ್ಶಿ ಅಲಿ ತುರ್ಕಳಿಕ್ಕೆ ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಸೆಕ್ಟರ್ ಅಧ್ಯಕ್ಷ ರಝ್ಝಾಕ್ ಲತೀಫಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸೆಕ್ಟರ್ ಜೊತೆ ಕಾರ್ಯದರ್ಶಿ ಉನೈಸ್ ಅಹ್ಮದ್ ಕುಂತೂರು, ಸಿರಾಜ್ ಆತೂರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಕ್ಯಾಂಪಸ್ ವಿಂಗ್ ನಾಯಕರಾದ ಮುನವ್ವರ್ ಆತೂರು ಸ್ವಾಗತಿಸಿ ಮುರ್ಶಿದ್ ಕೆಮ್ಮಾರ ವಂದಿಸಿದರು.