ಮದೀನಾ: ಭಾರತೀಯ ಹಜ್ ಯಾತ್ರಿಕರಿಗೆ ಉಚಿತ ಮೊಬೈಲ್ ಫೋನ್ ಸಿಮ್ ಕಾರ್ಡುಗಳನ್ನು ನೀಡಲಾಗುತ್ತಿದೆ. ಸೌದಿ ಅರೇಬಿಯಾದಲ್ಲಿನ ಮೊಬೈಲಿ ಕಂಪನಿಯ ಸಿಮ್ ಕಾರ್ಡ್ ಅನ್ನು ಹೊರಡುವ ವಿಮಾನ ನಿಲ್ದಾಣದಿಂದಲೇ ವಿತರಿಸಲಾಗುತ್ತಿದೆ.
ಮದೀನಾಕ್ಕೆ ತಲುಪಿದ ಭಾರತೀಯ ಯಾತ್ರಿಕರು ಮೊಬೈಲ್ ಫೋನ್ ಸಿಮ್ ಕಾರ್ಡ್ ಗಳನ್ನು ಸಕ್ರಿಯಗೊಳಿಸುವ ಸನ್ನಾಹದಲ್ಲಿದ್ದಾರೆ. ಮೊಬೈಲ್ ಪ್ರತಿನಿಧಿಗಳು ಹಜ್ಜಾಜ್‌ಗಳ ವಾಸ ಸ್ಥಳಗಳಿಗೆ ಭೇಟಿ ನೀಡಿ ಕಾರ್ಡುಗಳನ್ನು ಸ್ಕ್ಯಾನರ್ ಮೂಲಕ ಸಕ್ರಿಯಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಮರು ರೀಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಿಮ್ ಕಾರ್ಡ್ಗಳನ್ನು ಕ್ರಿಯಾತ್ಮಕವಾಗಿ ಸಕ್ರಿಯಗೊಳಿಸಲು ಭಾರತೀಯ ಸ್ವಯಂಸೇವಕರು ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಭಾರತೀಯ ಯಾತ್ರಿಕರು ತಲುಪಿದ್ದು, ಹಜ್ ಮಿಷನ್‌ನ ನೇತೃತ್ವದ ವೈದ್ಯಕೀಯ ತಂಡವು ತಮ್ಮ ಚಟುವಟಿಕೆಗಳನ್ನು ಆರಂಭಿಸಿದೆ.ಭಾರತೀಯ ವೈದ್ಯರು ಮತ್ತು ಸಿಬ್ಬಂದಿಗಳು ವೈದ್ಯಕೀಯ ತಂಡದಲ್ಲಿದ್ದಾರೆ.
ನಾಲ್ಕು ಚಿಕಿತ್ಸಾಲಯಗಳು ತೀರ್ಥಯಾತ್ರೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 15 ಹಾಸಿಗೆಯ ಆರೋಗ್ಯ ಕೇಂದ್ರವನ್ನು ಹಜ್ ಮಿಷನ್ ಕಾರ್ಯಗತಗೊಳಿಸಿದೆ. ಬುರ್ಜ, ಮುವದ್ದ, ಮುಖ್ತಾರ್, ಗೋಲ್ಡನ್ ಹೋಟೆಲ್, ಬಿಲಾಲ್ ಮಸೀದಿ ಅಲ್-ಆದಿಲ್ ಹೋಟೆಲ್ ಮುಂತಾದೆಡೆಗಳಲ್ಲಿ ಇತರ ಕ್ಲಿನಿಕ್ ಗಳು ಕಾರ್ಯ ನಿರ್ವಹಿಸುತ್ತಿದೆ.