janadhvani

Kannada Online News Paper

ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು ಡಿ:5ಕ್ಕೆ ಕೊನೆ ಎಲ್ಲರೂ ಅಪ್ಲೋಡ್ ಮಾಡಲು ಸುನ್ನೀ ಕೋ-ಓಡಿನೇಶನ್ ಕರೆ

ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಕಾರ್ಯವು ಜಾರಿಯಲ್ಲಿದ್ದು, ಉಡುಪಿ ಜಿಲ್ಲಾ ವಕ್ಫ್ ಕಚೇರಿಯಲ್ಲಿ ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ

ನವೆಂಬರ್ 12 ಮಧ್ಯಾಹ್ನ 3.30ರ ತನಕ ಸಿಕ್ಕಿರುವ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಡಾಟಾ ಎಂಟ್ರಿ ಆದ ವಿವರ

ಒಟ್ಟು143 ವಕ್ಫ್ ಸಂಸ್ಥೆಯ 630 ಆಸ್ತಿಗಳಲ್ಲಿ 377

(@Karkala Shadi Mahal 25

@Kaup Butterfly Hall 07

By District Wakf staff MANIPAL 345 )

ಆಸ್ತಿಗಳು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಆಗಿರುತ್ತದೆ. ಅಂದರೆ 59 ಶೇಕಡ ಪೂರ್ತಿ ಗೊಂಡಿರುತ್ತದೆ. ಬಾಕಿ ಇರುವ ವಕ್ಫ್ ಆಸ್ತಿಗಳನ್ನು ಕೂಡಲೇ ಉಮೀದ್ ಹ್ಯಾಪ್ ನಲ್ಲಿ ಸಂಬಂಧಪಟ್ಟ ಸಂಸ್ಥೆಯವರು ಆದಷ್ಟು ಬೇಗ ಅಪ್ಲೋಡ್ ಮಾಡಲು ಈ ಮೂಲಕ ವಿನಂತಿ.

ಜಿಲ್ಲೆಯ ಸುನ್ನಿ ಸಂಘಟನೆಗಳ ಒಕ್ಕೂಟವಾದ ಸುನ್ನೀ ಕೋ ಓರ್ಡಿನೇಷನ್ ಜಿಲ್ಲಾ ಸಮಿತಿಯು ನಿರಂತರ ವಕ್ಫ್ ಕಚೇರಿಯ ಸಿಬ್ಬಂದಿಗಳಿಗೆ ಈ ಬಗ್ಗೆ ಉಮೀದ್ ಪೋರ್ಟಲ್’ನಲ್ಲಿ ಆಸ್ತಿಗಳನ್ನು ಅಪ್ಲೋಡ್ ಮಾಡಲು ಸಂಪೂರ್ಣ ಸಹಕಾರ ನೀಡುತ್ತಿದ್ದು, 100 ಶೇಕಡ ಆಗುವವರೆಗೂ ನಮ್ಮ ಸಹಕಾರ ಸದಾ ಇದೆ ಇನ್ ಶಾ ಅಲ್ಲಾಹ್

ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು ಬೇಕಾಗಿರುವ ದಾಖಲೆಗಳು

ಅಧ್ಯಕ್ಷ / ಕಾರ್ಯದರ್ಶಿಯವರ

1) ಆಧಾರ್ ಚೀಟಿ

2) ಚುನಾವಣಾ ಗುರುತು ಚೀಟಿ

3) ಒಂದು ಪಾಸ್ಪೋರ್ಟ್

ಅಳತೆಯ ಭಾವಚಿತ್ರ

ಮಸೀದಿ/ಮದರಸ/ಖಬ್ರುಸ್ಥಾನ ಹಾಗೂ ಇನ್ನಿತರ ವಕಫ್ ಸಂಸ್ಥೆಗಳ ಅಪ್ಲೋಡ್ ಮಾಡಲು ಬೇಕಾಗಿರುವ ದಾಖಲೆಗಳು

1) ಆಸ್ತಿಯ ದಾಖಲೆ ಪತ್ರಗಳು

(ಗಡಿಗುರುತಿನೊಂದಿಗೆ)

2) ಪಹಣಿ ಪತ್ರ

3) ವಕಫ್ ನೋಂದಾವಣೆ ಪತ್ರ /ಗಜೆಟ್ ನೋಟಿಫಿಕೇಶನ್ ಕೋಪಿ

4) ನೋಂದಾಯಿತ ಆಡಳಿತ

ಸಮಿತಿಯ ಆದೇಶ ಪ್ರತಿ

5) ಲೀಸ್ ಅಗ್ರಿಮೆಂಟ್ ಪ್ರತಿ (ಇದ್ದರೆ)

6) 2024-25 ನೇ ಸಾಲಿನ ಲೆಕ್ಕಪತ್ರ

ಅಲ್ಲಾಹನ ಆಸ್ತಿಯನ್ನು ಉಳಿಸುವಲ್ಲಿ ನಮ್ಮದೂ ಒಂದು ಪಾಲು ಇರಲಿ..

ವಿ ಸೂ :ಉಮೀದ್ ಪೋರ್ಟಲ್’ನಲ್ಲಿ ಅಪ್ಲೋಡ್ ಮಾಡಲು ಯಾವುದೇ ಕ್ಯಾಂಪ್ ನ್ನು ಕಾಯಬೇಕೆಂದಿಲ್ಲ ಮಣಿಪಾಲದಲ್ಲಿರುವರ ವಕ್ಫ್ ಜಿಲ್ಲಾ ಕಛೇರಿಗೆ ಸಂಪೂರ್ಣ ದಾಖಲೆಯೊಂದಿಗೆ ಭೇಟಿಯಾಗಿ …

ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ

ಅಧ್ಯಕ್ಷರು

ಸುನ್ನೀ ಕೋ-ಓಡಿನೇಶನ್ ಉಡುಪಿ ಜಿಲ್ಲಾ ಸಮಿತಿ

9844989833