ರಿಯಾದ್: ಸೌದಿ ಅರೇಬಿಯಾವು ಪ್ರವಾಸಿಗರು ಮತ್ತು GCC ದೇಶಗಳ ಸಂದರ್ಶಕರಿಗೆ VAT ಮರುಪಾವತಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಝಕಾತ್, ತೆರಿಗೆ ಮತ್ತು ಕಸ್ಟಮ್ಸ್ ಪ್ರಾಧಿಕಾರದ ನೇತೃತ್ವದಲ್ಲಿ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿಯಲ್ಲಿ, ಅಧಿಕೃತ ಚಿಲ್ಲರೆ ಮಾರಾಟ ಮಳಿಗೆಗಳಿಂದ ಸರಕುಗಳನ್ನು ಖರೀದಿಸುವ ಸಂದರ್ಶಕರು VAT ಮೊತ್ತದ ಪೂರ್ಣ ಮರುಪಾವತಿಯನ್ನು, ಅಂದರೆ 15%. ಪಡೆಯುತ್ತಾರೆ,
ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವುದು ಮತ್ತು ಸಂದರ್ಶಕರಿಗೆ ಉತ್ತಮ ಶಾಪಿಂಗ್ ಅನುಭವವನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ. ಈ ಸೇವೆಯು 1,442 ಅಧಿಕೃತ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಲಭ್ಯವಿರುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟ ವಿದೇಶಿಯರು ಮತ್ತು ತಾತ್ಕಾಲಿಕ ಜಿಸಿಸಿ ಸಂದರ್ಶಕರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಮರುಪಾವತಿಯ ಮಾನದಂಡಗಳು:
5,000 ರಿಯಾಲ್‌ಗಳಿಗಿಂತ ಹೆಚ್ಚಿನ ಮೌಲ್ಯದ ವೈಯಕ್ತಿಕ ಬಳಕೆಗಾಗಿರುವ ಉತ್ಪನ್ನಗಳಿಗೆ ವ್ಯಾಟ್ ಮರುಪಾವತಿಸಲಾಗುತ್ತದೆ.
ಯೋಜನೆಯ ಪ್ರಯೋಜನವನ್ನು ಪಡೆಯಲು, ತಮ್ಮ ಪಾಸ್‌ಪೋರ್ಟ್ ಅಥವಾ ಜಿಸಿಸಿ ಐಡಿ ಬಳಸಿ ಅಧಿಕೃತ ಚಿಲ್ಲರೆ ಮಾರಾಟ ಮಳಿಗೆಯಿಂದ ವ್ಯಾಟ್ ಮರುಪಾವತಿ ಫಾರ್ಮ್ ಅನ್ನು ಪಡೆಯಬೇಕು.
ಮರು ಪ್ರಯಾಣಕ್ಕೂ ಮುನ್ನ, ರಿಯಾದ್‌ನ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜೆದ್ದಾದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ಮತ್ತು ದಮ್ಮಾಮ್‌ನ ಕಿಂಗ್ ಫಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಿಶೇಷ ಕೌಂಟರ್‌ಗಳಿಂದ ಮರುಪಾವತಿಯನ್ನು ಪಡೆಯಬಹುದು.
ಮರುಪಾವತಿಯನ್ನು ನಗದು ರೂಪದಲ್ಲಿ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕವೂ ಪಡೆಯಬಹುದಾಗಿದೆ.
ವಿನಾಯಿತಿ ಇಲ್ಲದ ಉತ್ಪನ್ನಗಳು:
ಸೌದಿ ಅರೇಬಿಯಾದಲ್ಲಿ ಬಳಸುವ ಉತ್ಪನ್ನಗಳು, ವಸತಿ, ಆಹಾರ, ವಾಹನಗಳು, ದೋಣಿಗಳು, ವಿಮಾನಗಳು, ಪಾನೀಯಗಳು, ಆಹಾರ ಪದಾರ್ಥಗಳು, ತಂಬಾಕು ಉತ್ಪನ್ನಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಈ ಮರುಪಾವತಿ ಯೋಜನೆಯು ಅನ್ವಯಿಸುವುದಿಲ್ಲ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ