ರಿಯಾದ್: ಹಿಜ್ರಾ 1447 ರ ಋತುವಿನ ಎಲ್ಲಾ ಉಮ್ರಾ ವೀಸಾ ಅರ್ಜಿದಾರರಿಗೆ ನುಸುಕ್ ಮಸಾರ್ ಪ್ಲಾಟ್‌ಫಾರ್ಮ್ ಮೂಲಕ ದೃಢೀಕೃತ ಹೋಟೆಲ್ ಬುಕಿಂಗ್‌ಗಳು ಈಗ ಕಡ್ಡಾಯವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಿಸಿದೆ.
“ಸೇವಾ ಗುಣಮಟ್ಟವನ್ನು ಸುಧಾರಿಸಲು ಮತ್ತು ಯಾತ್ರಿಕರ ಅನುಭವವನ್ನು ಉತ್ಕೃಷ್ಟಗೊಳಿಸಲು, 1447H ಉಮ್ರಾ ವೀಸಾ ವಿತರಣೆಗಳಿಗೆ ಈಗ ನುಸುಕ್ ಮಸಾರ್ ಮೂಲಕ ವಸತಿ ದಾಖಲಾತಿ ಕಡ್ಡಾಯ” ಎಂದು ಸಚಿವಾಲಯವು ತನ್ನ ಅಧಿಕೃತ X ವೇದಿಕೆಯಲ್ಲಿ ತಿಳಿಸಿದೆ.
ಹೊಸ ನಿಯಮಗಳ ಅಡಿಯಲ್ಲಿ, ಎಲ್ಲಾ ಉಮ್ರಾ ನಿರ್ವಾಹಕರು ಮತ್ತು ಏಜೆಂಟರು ಪ್ರವಾಸೋದ್ಯಮ ಸಚಿವಾಲಯದಿಂದ ಪರವಾನಗಿ ಪಡೆದ ಮತ್ತು ಅನುಮೋದಿಸಲ್ಪಟ್ಟ ಹೋಟೆಲ್‌ಗಳಲ್ಲಿ ಬುಕಿಂಗ್ ನ್ನು ಸೀಮಿತಗೊಳಿಸಬೇಕು. ಪಾರದರ್ಶಕತೆ ಮತ್ತು ಗುಣಮಟ್ಟದ ಭರವಸೆಯನ್ನು ಖಚಿತಪಡಿಸಿಕೊಳ್ಳಲು ಒಪ್ಪಂದಗಳನ್ನು ನುಸುಕ್ ಮಸಾರ್ ವೇದಿಕೆಯ ಮೂಲಕ ದಾಖಲಿಸಬೇಕು ಮತ್ತು ಅಪ್‌ಲೋಡ್ ಮಾಡಬೇಕು.
ಹೊಸ ನಿಯಮವನ್ನು ಪಾಲಿಸಲು ವಿಫಲವಾದರೆ ವೀಸಾ ವಿಳಂಬ, ನಿರಾಕರಣೆ ಅಥವಾ ಆರ್ಥಿಕ ದಂಡಕ್ಕೆ ಕಾರಣವಾಗಬಹುದು ಎಂದು ಸಚಿವಾಲಯ ಎಚ್ಚರಿಸಿದೆ.
ಹೋಟೆಲ್ ಬುಕಿಂಗ್‌ಗಳು, ವಸತಿ ಒಪ್ಪಂದ ಅಪ್‌ಲೋಡ್‌ಗಳು, ಪರವಾನಗಿ ನಿರ್ವಹಣೆ ಮತ್ತು ಬಹುಭಾಷಾ ಪ್ರಯಾಣ ಸಾಮಗ್ರಿಗಳಿಗೆ ಪ್ರವೇಶ ಸೇರಿದಂತೆ ಎಲ್ಲಾ ಉಮ್ರಾ ಸಂಬಂಧಿತ ಸೇವೆಗಳನ್ನು ನಿರ್ವಹಿಸಲು ನುಸುಕ್ ಮಸಾರ್ ವೇದಿಕೆಯು ಕೇಂದ್ರ ಪೋರ್ಟಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವಾಲಯ ಒತ್ತಿ ಹೇಳಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್‌ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ