ವಿಟ್ಲ :ಸಾಮಾಜಿಕ ಸೇವಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು “ಬಡವರ ಬಾಳಿಗೆ ನನ್ನದೊಂದು ಪಾಲು” ಎಂಬ ದ್ಯೇಯವನ್ನು ಮುಂದಿಟ್ಟು ಕಾರ್ಯಾಚರಿಸುತ್ತಿರುವ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಹಾಗೂ ದುಲ್ ಫುಖಾರ್ ಗಲ್ಫ್ ಕಮಿಟಿ
ಜಂಟಿ ಆಶ್ರಯದಲ್ಲಿ 2025 ನೇ ಸಾಲಿನ ರಮಲಾನ್ ಕಿಟ್ ವಿತರಣೆಗೆ 10/03/2025 ಸೋಮವಾರ ರಮಳಾನ್ 9 ರಂದು
ಕನ್ಯಾನ ಶಾಹುಲ್ ಹಮೀದ್ ವಲಿಯುಲ್ಲಾಹಿ ಮಖಾಂ ಪರಿಸರದಲ್ಲಿ ಚಾಲನೆ ನೀಡಲಾಯಿತು.
ಪವಿತ್ರ ರಂಜಾನ್ ತಿಂಗಳಲ್ಲಿ ಪ್ರತೀ ವರ್ಷವೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಮತ್ತು ಅನಾಥರಾದ ಕುಟುಂಬಗಳಿಗೆ ನೀಡುತ್ತಿರುವಂತಹ ನಿತ್ಯೋಪಯೋಗಿ ವಸ್ತುಗಳ ಕಿಟ್ ವಿತರಣೆಯು ಗ್ರಾಮೀಣ ಪ್ರದೇಶವಾದ ಕನ್ಯಾನ ಕರೋಪಾಡಿ ಭಾಗದಲ್ಲಿ ಬಡಜನರಿಗೆ ಬಹುದೊಡ್ಡ ಸಹಕಾರಿ.
ಕನ್ಯಾನ ಕೇಂದ್ರ ಜುಮಾ ಮಸೀದಿಯ ಮುಖ್ಯ ಧರ್ಮ ಗುರು ಇಬ್ರಾಹಿಂ ಫೈಝಿ ಉಸ್ತಾದ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಸುಮಾರು 60 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.
ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ ಪಿ ಅಬ್ದುಲ್ ರಹಿಮಾನ್ ಸಹಿತ ಕಮಿಟಿ ಪದಾದಿಕಾರಿಗಳು ಉಪಸ್ಥಿತರಿದ್ದರು.
ವೈದ್ಯಕೀಯ ಸಹಾಯಧನ, ಬಡ ಮತ್ತು ಅನಾಥರಾದ ಹೆಣ್ಣು ಮಕ್ಕಳ ಮದುವೆಗೆ ಸಹಾಯ ,ಮನೆ ನಿರ್ಮಾಣ, ಆರೋಗ್ಯ ಸೇವೆ ಮುಂತಾದ ರಂಗದಲ್ಲಿ ಸದಾ ಮಂಚೂಣಿಯಲ್ಲಿರುವ ದುಲ್ ಪ್ರಖಾರ್ ಸೇವಾ ಟ್ರಸ್ಟ್ ಕನ್ಯಾನ ಮತ್ತು ಪರಿಸರ ಪ್ರದೇಶದಲ್ಲಿ ಸದಾ ಸಮಯ ಬಡ ಮತ್ತು ಅನಾಥರಿಗಾಗಿ ಸೇವೆಗೈಯುತ್ತಾ ಮುಂದುವರಿಯುತ್ತಿದೆ.