janadhvani

Kannada Online News Paper

ಎಸ್.ವೈ.ಎಸ್ ಝೋನ್ ಮಟ್ಟದ ಸದಸ್ಯತ್ವ ಮಾಹಿತಿ ಕಾರ್ಯಾಗಾರ

ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆಯ ಅಧೀನದಲ್ಲಿರುವ 7 ಝೋನ್ ಗಳ ಸದಸ್ಯತ್ವ ಮಾಹಿತಿ ಕಾರ್ಯಾಗಾರವು ಡಿಸೆಂಬರ್ 22,23 ,25,26 ಹಾಗೂ27 ದಿನಾಂಕಗಳಲ್ಲಿ ನಡೆಯಲಿದೆ.

ಬಂಟ್ವಾಳ ಝೋನ್ ಕಾರ್ಯಾಗಾರವು ಈಗಾಗಲೇ ಮುಗಿದಿದ್ದು, ದೇರಳಕಟ್ಟೆ ಝೋನ್ ಸದಸ್ಯತ್ವ ಮಾಹಿತಿ ಕಾರ್ಯಾಗಾರವು ಡಿಸೆಂಬರ್ 22 ಆದಿತ್ಯವಾರ ಮಧ್ಯಾಹ್ನ 2:30 ಗಂಟೆಗೆ ತಿಬ್ಲೆಪದವು ರಹ್ಮಾನಿಯ ಮದ್ರಸದಲ್ಲೂ, ಮೂಡಬಿದ್ರೆ ಝೋನ್ ಕಾರ್ಯಾಗಾರವು ಡಿಸೆಂಬರ್ 22 ಆದಿತ್ಯವಾರ ಮಧ್ಯಾಹ್ನ 3:00 ಗಂಟೆಗೆ ಕೈಕಂಬ ಮೇಘ ಹಾಲ್ ನಲ್ಲೂ, ಮಂಗಳೂರು ಝೋನ್ ಕಾರ್ಯಾಗಾರವು ಡಿಸೆಂಬರ್ 22 ಆದಿತ್ಯವಾರ 6:30 ಗಂಟೆಗೆ ಪೆರಿಮಾರ್ ಸುನ್ನೀ ಸೆಂಟರ್ ನಲ್ಲೂ, ಸುರತ್ಕಲ್ ಝೋನ್ ಕಾರ್ಯಾಗಾರವು ಡಿಸೆಂಬರ್ 23 ಸೋಮವಾರ ರಾತ್ರಿ 8:00 ಗಂಟೆಗೆ ಕಾಟಿಪಳ್ಳ ಸುನ್ನೀ ಸೆಂಟರ್ ನಲ್ಲೂ, ಮುಡಿಪು ಝೋನ್ ಕಾರ್ಯಾಗಾರವು ಡಿಸೆಂಬರ್ 26 ಗುರುವಾರ ಸಂಜೆ 6:30 ಗಂಟೆಗೆ ಮುಡಿಪು ಮಜ್ಲಿಸ್ ಎಜ್ಯುಪಾರ್ಕ್ ನಲ್ಲೂ ಹಾಗೂ ಉಳ್ಳಾಲ ಝೋನ್ ಕಾರ್ಯಾಗಾರವು ಡಿಸೆಂಬರ್ 27 ಶುಕ್ರವಾರ ರಾತ್ರಿ 8:00 ಗಂಟೆಗೆ ತಾಜುಲ್ ಉಲಮಾ ಸುನ್ನೀ ಸೆಂಟರ್ ಮೇಲಂಗಡಿಯಲ್ಲಿ ನಡೆಯಲಿದೆ ಎಂದು ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com