ಕಲ್ಲಿಕೋಟೆ : ಕಲ್ಲಿಕೋಟೆ ಮರ್ಕಝ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳು ಕಟ್ಟಿಕೊಂಡಿರುವ ಸಂಘ Markaz KSO ಇದರ ವಾರ್ಷಿಕ ಕನ್ನಡ ಕಲಾ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಇಝ್ದಿಹಾರ್ ಶೀರ್ಷಿಕೆಯಲ್ಲಿ ಡಿಸೆಂಬರ್ ತಿಂಗಳ 17,18,19,20 ನಾಲ್ಕು ದಿನಗಳಲ್ಲಿ ನಡೆಯಿತು.
ನೂರ ನಲ್ವತ್ತು ವಿದ್ಯಾರ್ಥಿಗಳು ಭಾಗವಹಿಸುವ ಅರವತ್ತಕ್ಕೂ ಮಿಕ್ಕ ವೈವಿಧ್ಯಮಯ ಕಾರ್ಯಕ್ರಮಗಳು ನಾಲ್ಕು ವೇದಿಕೆಗಳಲ್ಲಿ ಜರುಗಿದ್ದು ವಿದ್ಯಾರ್ಥಿಗಳ ಪ್ರತಿಭಾ ಅನಾವರಣಗೊಂಡಿದೆ. ಕಾಲಾತೀತ ಜ್ಞಾನದಾಳಕ್ಕೆ ಪ್ರಮೇಯದಡಿಯಲ್ಲಿ ಮುಸ್ಲಿಂ ವಿದ್ವತ್ ಪರಂಪರೆ, ಇತಿಹಾಸ , ವರ್ತಮಾನ , ಭವಿಷ್ಯ ದ ಕುರಿತು ಈ ವೇದಿಕೆಗಳು ಬಹುವಾಗಿ ಚರ್ಚಿಸಿದೆ.
ಇಝ್ದಿಹಾರ್ ವಾರ್ಷಿಕ ಕಲಾ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್ ಉಸ್ತಾದರು ಮತ್ತು ಕರ್ನಾಟಕ ರಾಜ್ಯ ಉಲಮಾ ಒಕ್ಕೂಟ ಇದರ ಅಧ್ಯಕ್ಷರಾದ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್, ಮಾಣಿ ಭಾಗವಹಿಸಿ ಆಶೀರ್ವಚನ ನೀಡಿದರು. ಜಾಮಿಯಾ ಮರ್ಕಝ್ ಚಾನ್ಸಲರ್ ಸಿ.ಉಸ್ತಾದ್, ವೈಸ್ ಚಾನ್ಸಲರ್ ಅಡ್ವ ಹುಸೈನ್ ಸಖಾಫಿ ಉಸ್ತಾದ್ ಮತ್ತು ಪ್ರಧಾನ ಮುದರ್ರಿಸ್
ಧನ್ಯ ಉಪಸ್ಥಿತಿಯೂ ಮೆರುಗು ನೀಡಿದೆ.
ಕಶಫ್ ಶೇಫ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ, ಫಹಸ್ ಸ್ಕೋಪ್ ತಂಡ ರನ್ನರ್ ಗೆ ತೃಪ್ತಿಪಟ್ಟುಕೊಂಡಿದೆ. ಕಳೆದ ಮೂವತ್ತೆರಡು ವರ್ಷದ ಕೆಳಗೆ ಮೃದಾಳಿದ ಕನ್ನಡ ವಿದ್ಯಾರ್ಥಿ ಸಂಘಟನೆಗೆ ಇದೊಂದು ಹೊಸ ಮೈಲುಗಲ್ಲಾಗಿದೆ.