ಕರ್ನಾಟಕ ರಾಜ್ಯ ಎಸ್ ವೈಎಸ್ ಪುತ್ತೂರು ಝೋನ್ ವ್ಯಾಪ್ತಿಯ ಮಾಡಾವು, ಕುಂಬ್ರ, ಪುತ್ತೂರು, ರೆಂಜ, ಕಬಕ, ಮಾಣಿ, ಈಶ್ವರಮಂಗಲ ಸರ್ಕಲ್ ನ ಕ್ಯಾಬಿನೆಟ್ ಸದಸ್ಯರು ಹಾಗೂ ಝೋನ್ ಸಮಿತಿ ಸದಸ್ಯರಿಗೆ ಸದಸ್ಯತ್ವ ಕಾರ್ಯಾಗಾರ ವು ಪುತ್ತೂರು ಪಡೀಲ್ ಸುನ್ನೀ ಸೆಂಟರ್ ನಲ್ಲಿ ಝೋನ್ ಅಧ್ಯಕ್ಷರಾದ ಅಬೂ ಶಝ ಉಸ್ತಾದ್ ಕೂರ್ನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ದ.ಕ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರು ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಮಿಸ್ಬಾಹಿ ಕರೋಪಾಡಿ ರವರು ಚುನಾವಣಾ ಕಾರ್ಯಾಗಾರ ದ ಬಗ್ಗೆ ಮಾಹಿತಿ ನೀಡಿದರು. ಸದಸ್ಯತ್ವ ನಿರ್ವಹಣೆ ಗಾಗಿ ಝೆಡ್ ಎಸ್ ಟಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
ಅಬ್ದುಲ್ ರಝಾಕ್ ಹಿಮಮಿ ಪೇರಲ್ತಡ್ಕ (ಚೇರ್ಮನ್) ಅಬ್ದುಲ್ ಅಝೀಝ್ ಚೆನ್ನಾರ್ (ಕನ್ವೀನರ್), ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ, ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಹಮೀದ್ ಕೊಯಿಲ, ಫವಾಝ್ ಕಟ್ಟತ್ತಾರು, ಶಾಹುಲ್ ಹಮೀದ್ ಕಬಕ ( ಸದಸ್ಯರು). ಅಬ್ದುಲ್ ಅಝೀಝ್ ಚೆನ್ನಾರ್ ರವರು ಸ್ವಾಗತಿಸಿ, ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ವಂದಿಸಿದರು.