janadhvani

Kannada Online News Paper

ಹಮಾಸ್ ನಾಯಕ ಹತ್ಯೆಗೆ ಪ್ರತಿಕಾರ: ಇಸ್ರೇಲ್ ವಿರುದ್ಧ ಇರಾನ್ ಕ್ಷಿಪಣಿ ದಾಳಿ

ಇಸ್ರೇಲ್ ಮೇಲೆ 400 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಉಡಾಯಿಸಿದೆ. ಇರಾನ್‌ನ ಪ್ರಮುಖ ನಗರಗಳಿಂದ ಇಸ್ರೇಲ್‌ ಗುರಿಯಾಗಿಸಿ, ಕ್ಷಿಪಣಿ ದಾಳಿ ನಡೆಸಲಾಗಿದೆ.

ಇಸ್ರೇಲ್: ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಭೀತಿ ಜೋರಾಗಿದೆ. ಅದರಲ್ಲೂ ಇರಾನ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಜೋರಾಗಿದೆ. ಇಂದು ಇಸ್ರೇಲ್ ಮೇಲೆ ಇರಾನ್ ಭೀಕರವಾಗಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 400 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಉಡಾಯಿಸಿದೆ. ಇರಾನ್‌ನ ಪ್ರಮುಖ ನಗರಗಳಿಂದ ಇಸ್ರೇಲ್‌ ಗುರಿಯಾಗಿಸಿ, ಕ್ಷಿಪಣಿ ದಾಳಿ ನಡೆಸಲಾಗಿದೆ. ಇರಾನ್‌ನ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್, ಕರಾಜ್ ಮತ್ತು ಅರಾಕ್‌ಸೇರಿದಂತೆ ಹಲವೆಡೆಯಿಂದ ಇಸ್ರೇಲ್ ಮೇಲೆ ಸುಮಾರು 400 ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಹಮಾಸ್ ನಾಯಕ ಹತ್ಯೆಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸುವ ನಿರ್ಧಾರವನ್ನು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ (SNSC) ಮಾಡಿದೆ ಅಂತ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಸುರಕ್ಷಿತವಾಗಿರುವಂತೆ ಭಾರತೀಯರಿಗೆ ಸಲಹೆ

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಇರಾನ್ಗೆ ಎಚ್ಚರಿಕೆ ನೀಡಿದೆ. ತಾವು ಇಸ್ರೇಲ್ ದೇಶದ ಪರವಾಗಿ ಇರುವುದಾಗಿ ಘೋಷಿಸಿಕೊಂಡಿದೆ. ಇನ್ನೊಂದೆಡೆ ಯುದ್ಧದ ತೀವ್ರತೆ ಹೆಚ್ಚಾಗಿರುವುದರಿಂದ ಇಸ್ರೇಲ್‌ಗೆ ವಿವಿಧ ಕಾರಣಗಳಿಗಾಗಿ ತೆರಳಿರುವ ಭಾರತೀಯರು ಸುರಕ್ಷಿತ ಸ್ಥಳಗಳಲ್ಲಿ ನೆಲೆಸುವಂತೆ. ತಮ್ಮ ಸುರಕ್ಷತೆ ಕಾಯ್ದುಕೊಳ್ಳುವಂತೆ ಭಾರತ ಸರ್ಕಾರ ಸಲಹೆ ನೀಡಿದೆ.

ಹಮಾಸ್ ನಾಯಕ ಹತ್ಯೆಗೆ ಪ್ರತಿಕಾರ

ಜುಲೈ 31ರಂದು ಟೆಹ್ರಾನ್‌ನಲ್ಲಿ ಫೆಲೆಸ್ತೀನ್ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ನನ್ನು ಇಸ್ರೇಲ್ ಹತ್ಯೆ ಮಾಡಲಾಗಿತ್ತು. ಸೆಪ್ಟೆಂಬರ್ 27 ರಂದು ಬೈರುತ್, ಲೆಬನಾನ್‌ನಲ್ಲಿ ತನ್ನ ಬೃಹತ್ ವೈಮಾನಿಕ ದಾಳಿಯಲ್ಲಿ ಇರಾನಿನ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನಿಲ್ಫೊರೌಶನ್ ಎಂಬವರನ್ನೂ ಇಸ್ರೇಲ್ ಹತ್ಯೆ ಮಾಡಿತ್ತು. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com