ಅಕ್ಟೋಬರ್ 01 ಮತ್ತು 02 ಕ್ಕೆ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಆಶ್ರಯದಲ್ಲಿ ನಡೆಯಲಿರುವ ಜಶ್ನೆ ಮದೀನಾ ಮೀಲಾದ್ ಕಾರ್ಯಕ್ರಮ ಮತ್ತು ಕೂರತ್ ತಂಗಳ್ ಅನುಸ್ಮರಣಾ ಕಾರ್ಯಕ್ರಮಕ್ಕೆ ದಾರುಲ್ ಹಿಕ್ಮ ಕ್ಯಾಂಪಸ್ ಮತ್ತು ಪರಿಸರ ಸಂಪೂರ್ಣವಾಗಿ ಸಜ್ಜುಗೊಂಡಿದೆ.
ದಿನಾಂಕ 01 ಮಂಗಳವಾರ ದಾರುಲ್ ಹಿಕ್ಮ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ ಸ್ವಾಗತದೊಂದಿಗೆ ಆರಂಭಗೊಳ್ಳಲಿರುವ
ಕಾರ್ಯಕ್ರಮವನ್ನು ದಾರುಲ್ ಹಿಕ್ಮ ಮುದರ್ರಿಸ್ ಹಾಫಿಜ್ ರಂಶೀದ್ ಸಖಾಫಿ ಉದ್ಘಾಟನೆ ನಡೆಸಲಿದ್ದಾರೆ.
ಕಾಜೂರ್ ತಂಗಳ್ ಅವರ ನೇತೃತ್ವದಲ್ಲಿ ಬೃಹತ್ ಮೌಲೂದ್ ಮಜಲಿಸ್ ಹಾಗೂ ದುಃವಾ ಮತ್ತು ಉಮರ್ ಮುಸ್ಲಿಯಾರ್ ಮರ್ದಾಳ ಅವರು ಕೂರತ್ ತಂಗಳ್ ಅನುಸ್ಮರಣಾ ಪ್ರಭಾಷಣ ಮಾಡಲಿದ್ದಾರೆ.
ವೇದಿಕೆಯಲ್ಲಿ ಹಸ್ಸನ್ ಸಖಾಫಿ ಬೆಳ್ಳಾರೆ, ಮಪಾಲಡ್ಕ ಮುದರ್ರಿಸ್ ಹಫೀಜ್ ಅಬ್ದುಲ್ ಸಲಾಮ್ ಚೆನ್ನಾರ್ ಸೇರಿದಂತೆ ಹಲವಾರು ಉಲಮಾ, ಉಮರಾ ನೇತಾರರು ಭಾಗವಹಿಸಲಿದ್ದಾರೆ.
ದಿನಾಂಕ 02 ಬುಧವಾರ ದಾರುಲ್ ಹಿಕ್ಮ ದರ್ಸ್ , ಮದರಸ ಮತ್ತು ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ . ಅದೇ ದಿನ ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು
ಮೀಲಾದ್ ಸಮಿತಿ ಚೇರ್ಮ್ಯಾನ್ ನವಾಜ್ ಬೆಳ್ಳಾರೆ, ಕನ್ವಿನರ್ ಹೈದರ್ ಅಲಿ ಕಳಂಜ , ಫೈನಾನ್ಸ್ ಕನ್ವಿನರ್ ಕದೀರ್ ಬಿಸ್ಮಿಲ್ಲಾ, ಸಂಸ್ಥೆಯ ಮ್ಯಾನೇಜರ್ ಸತ್ತಾರ್ ಸಖಾಫಿ ಅವರು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.