ದುಬೈ : ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ವತಿಯಿಂದ ಹುಟ್ಟೂರಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ದುಬೈ ದೇರಾ ಗಾರ್ಡನ್ ಸಿಟಿ ಥ್ರೀ ಸ್ಟಾರ್ ಹೋಟೆಲ್ ನಲ್ಲಿ ನಡೆಯಿತು.
ಪುರಾತನ ಕಾಲದ ಮತ್ತು ಹೊಸತನದ ಎಲ್ಲಾ ತರಹದ ವಸ್ತುಗಳನ್ನು ಮತ್ತು ಹಲವಾರು ದಾಖಲೆಗಳನ್ನು ಇಟ್ಟು ಕಲ್ಲಡ್ಕ ಮ್ಯೂಸಿಯಂ ಯಾಸಿರ್ ಎಂದೇ ಖ್ಯಾತಿ ಪಡೆದ , ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದ ಕಲ್ಲಡ್ಕ ನಾಡಿನ ಹೆಮ್ಮೆಯ ಸಾಧಕ ಇವರ ಮ್ಯೂಸಿಯಂ ವೀಕ್ಷಣೆಗೆ ದೇಶ ವಿದೇಶಗಳಿಂದ ಜನರು ಬರುತ್ತಿದ್ದಾರೆ ಇದೀಗ ಯಾಸಿರ್ ರವರು ದುಬೈಗೆ ಆಗಮಿಸಿದ್ದು ಅವರಿಗೆ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಸಂಸ್ಥೆಯು ಹುಟ್ಟೂರಿನ ಸಾಧಕನಿಗೆ ಸನ್ಮಾನ ಮಾಡಿತು.
ಅದೇ ರೀತಿ ಮಿಕ್ದಾದ್ ಗೋಳ್ತಮಜಲ್ ವಿಭಿನ್ನ ಚಿತ್ರ ಕಲೆಯನ್ನ ಬಿಡಿಸೋ ಸಾಧಕ ಇವರ ಚಿತ್ರ ಕಲೆಗೆ ಸಾಕಷ್ಟು ಕಡೆ ಹೊಗಳಿಕೆ , ಪ್ರಶಸ್ತಿ , ಮೆಚ್ಚುಗೆ ಸಿಕ್ಕಿದೆ ಇವರ ಅನೇಕ ಚಿತ್ರಗಳು ಸಾಧನೆಯ ಮಡಿಲಲ್ಲಿ ಕಂಗೊಳಿಸುವಂತಿದೆ. ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕರ್ನಾಟಕದ ಹೆಮ್ಮೆಯ ಸಾಧಕ ಮಿಕ್ದಾದ್ ಗೋಳ್ತಮಜಲ್.
ಕಲ್ಲಡ್ಕದ ಇಬ್ಬರು ಸಾಧಕರಿಗೆ ಕಲ್ಲಡ್ಕ ಯಾಸಿರ್ ಹಾಗೂ ಮಿಕ್ದಾದ್ ರವರಿಗೆ ದುಬೈಯಲ್ಲಿ ಸನ್ಮಾನ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು. ಅದೇ ರೀತಿ ಮಿಕ್ದಾದ್ ರವರು ಕಲ್ಲಡ್ಕ ಮ್ಯೂಸಿಯಂ ಯಾಸಿರ್ ರವರಿಗೆ ವೈಯುಕ್ತಿಕವಾಗಿ ಒಂದು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಅಧ್ಯಕ್ಷರಾದ ನವಾಝ್ ಹಜಾಜ್ ಗೋಳ್ತಮಜಲ್ ಅದೇ ರೀತಿ ಉಪಾಧ್ಯಕ್ಷರಾದ ರಫೀಕ್ ಸಾಹೇಬ್ ಹಾಗೂ ಸನ್ಮಾನಿತರಾದ ಯಾಸಿರ್ ಹಾಜಿ ಕಲ್ಲಡ್ಕ ಹಾಗು ಮಿಕ್ದಾದ್ ಗೋಳ್ತಮಜಲ್ ಮತ್ತು ಹಿರಿಯರಾದ ಹಸನ್ ಬಾವಾಕ ಉಪಸ್ಥಿತರಿದ್ದರು.
ಅರ್ಥಪೂರ್ಣ ಕಾರ್ಯಕ್ರಮವನ್ನು ಕೆ ಕೆ ಜಬ್ಬಾರ್ ಕಲ್ಲಡ್ಕ ನಿರೂಪಿಸಿದರೆ ನಾಸಿರ್ ಕಲ್ಲಡ್ಕ ವಂದಿಸಿದರು.
ವರದಿ : ಕೆ ಕೆ ಜಬ್ಬಾರ್ ಕಲ್ಲಡ್ಕ