ಮಸ್ಕತ್ : ಪ್ರವಾದಿ ಜನ್ಮ ದಿನಾಚರಣೆಗೆ ಸಂಬಂಧಿಸಿದಂತೆ ಒಮಾನ್ ನಲ್ಲಿ ರಜೆ ಘೋಷಿಸಲಾಗಿದೆ. ಸೆಪ್ಟೆಂಬರ್ 15 ರಂದು ಅಧಿಕೃತ ರಜೆ ಘೋಷಿಸಲಾಗಿದೆ.
ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ಅನ್ವಯಿಸುತ್ತದೆ. ವಾರಾಂತ್ಯದ ರಜಾದಿನಗಳು ಸೇರಿದಂತೆ ಒಮಾನ್‌ನಲ್ಲಿ ಒಟ್ಟು ಮೂರು ದಿನಗಳ ರಜೆ ಲಭಿಸಲಿದೆ.
ಇದೇ ವೇಳೆ ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ರಜೆ ಘೋಷಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳಿಗೆ ನಾಲ್ಕು ದಿನಗಳ ರಜೆ ಸಿಗಲಿದೆ. ಸೋಮವಾರ, ಸೆಪ್ಟೆಂಬರ್ 23 ರಂದು 94 ನೇ ರಾಷ್ಟ್ರೀಯ ದಿನ. ಶುಕ್ರವಾರ 20 ರಿಂದ ಸೋಮವಾರ 23 ರವರೆಗೆ ರಜೆ ಇರುತ್ತದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯ ಸೇರಿದಂತೆ ನಾಲ್ಕು ದಿನಗಳ ರಜೆ ಘೋಷಿಸಲಾಗಿದೆ.