ಬೆಂಗಳೂರು – SSF ಬೆಂಗಳೂರು ಜಿಲ್ಲಾ ವತಿಯಿಂದ ಪುಣ್ಯ ರಬೀಅ ಗೆ ಮುಂಚಿತವಾಗಿ,ರಬೀವುಲ್ ಅವ್ವಲ್ ನ ಮಹತ್ವ,ಪ್ರವಾದಿ (ಸ.ಅ) ಜೀವನ ನಡೆ ನುಡಿ ಪ್ರವಾದಿ ಸ್ನೇಹ ವನ್ನು ಕಲಿಸುವ ಮಹಬ್ಬ -3.0 ಕ್ಯಾಂಪ್ ತಾಜ್ ಹೆರಿಟೇಜ್ ಬನ್ನೇರುಘಟ್ಟ ದಲ್ಲಿ ನಡೆಯಿತು .ಪ್ರವಾದಿ (ಸ .ಅ )ರವರ ಜೀವನದ ಶೈಲಿ ಯನ್ನು ಆದರಿಸಿ 6 ಸೆಶನ್ ಗಳಾಗಿ ನಡೆದ ಕಾರ್ಯಕ್ರಮದಲ್ಲಿ ತರಗತಿಯನ್ನು ನಡೆಸಿಕೊಟ್ಟ ಸಯ್ಯದ್ ಜಲಾಲುದ್ದೀನ್ ತಂಗಳ್ ರವರು ಪ್ರವಾದಿ ಪ್ರೇಮ ,ಕುಟುಂಬ ಜೀವನ ,ಸೇವೆ ಮತ್ತು ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಬಗ್ಗೆ ಮಾತನಾಡಿ ಪ್ರವಾದಿ ಪ್ರೇಮದ ಜೊತೆಗೆ ಅವರ ಸುನ್ನತ್ ಗಳನ್ನೂ ನಮ್ಮ ಜೀವನದಲ್ಲಿ ಅತೀಯಾಗಿ ಅಳವಡಿಸಿಕೊಳ್ಳುವವರಾಗಬೇಕೆಂದು ತಿಳಿಸಿದರು .ಸಿರಾಜ್ ಸಖಾಫಿಯವರು ಪ್ರವಾದಿ ಪ್ರೇಮದ ಅಗತ್ಯತೆ ಮತ್ತು ಅದರಿಂದಾಗಿ ನಮ್ಮ ಜೀವನ ಶೈಲಿಯಲ್ಲಾಗುವ ಬದಲಾವಣೆ ಮತ್ತು ಮಹತ್ವ ಗಳನ್ನೂ ತಿಳಿಸಿದರು .ಅನಸ್ ಸಿದ್ದೀಕಿ ಸಿರಿಯಾ ಉಸ್ತಾದರು ಮಂಕೂಸ್ ಮೌಲಿದ್ ಮಹತ್ವ ಹಾಗೂ ಅದರ ಸಾರಾಂಶ ಎಂಬ ವಿಷಯವನ್ನಾಧರಿಸಿ ತರಗತಿ ನಡೆಸಿಕೊಟ್ಟರು.
ಈ ಶಿಬಿರದಲ್ಲಿ ನೂರಕ್ಕೂ ಮಿಕ್ಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.ಜಿಲ್ಲಾ ಅಧ್ಯಕ್ಷ ಅಬ್ದುಲ್ ಲತೀಫ್ ನಈಮಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪ್ರ.ಕಾರ್ಯದರ್ಶಿ ಶಬೀಬ್ ಸ್ವಾಗತಿಸಿ,ಮಹಬ್ಬ ಕನ್ವೀನರ್ ಅಖ್ತರ್ ಹುಸ್ಸೈನ್ ವಂದಿಸಿದರು.ಮಹಬ್ಬ ಚೇರ್ಮಾನ್ ಫಾರೂಕ್ ನಈಮಿ ಉಸ್ತಾದರು ಕಾರ್ಯಕ್ರಮವನ್ನು ನಿಯಂತ್ರಿಸಿದರು.