ಕರ್ನಾಟಕ ಮುಸ್ಲಿಂ ಜಮಾಅತ್,SჄS ಹಾಗೂ SSF ಸಂಘಟನೆಗಳ ಪ್ರಮುಖ ಕಾರ್ಯಾಚರಣೆಗಳ ಏಕೀಕರಣ ಸಮಿತಿ ಕೋ ಆರ್ಡಿನೇಶನ್ ಸಮಿತಿಯನ್ನು ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಬಿ.ಎಂ ಇಸ್ಮಾಈಲ್ ಹಾಜಿ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಮೀಂಪ್ರಿ, ಕೋಶಾಧಿಕಾರಿಯಾಗಿ ನೌಫಲ್ ಅಹ್ಸನಿ ರವರನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ಉಪಾಧ್ಯಕ್ಷರಾಗಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್,ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ,ಜೂತೆ ಕಾರ್ಯದರ್ಶಿಗಳಾಗಿ ಅಯ್ಯೂಬ್ ಖುತುಬಿನಗರ, ಮಹ್ಬೂಬ್ ಸಖಾಫಿ ಕಿನ್ಯ ರವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿಗೆ ಬಿ.ಎಂ ಇಸ್ಮಾಈಲ್ ಹಾಜಿ ಪರಮಾಂಡ,ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್,ಸಯ್ಯಿದ್ ಝೈನುಲ್ ಆಬಿದೀನ್ ಸಅದಿ ತಂಙಳ್ ಮೀಂಪ್ರಿ,ಕೆ.ಎಚ್ ಇಸ್ಮಾಈಲ್ ಸಅದಿ,ಎಂಕೆಎಂ ಇಸ್ಮಾಈಲ್ ಮೀಂಪ್ರಿ,ಅಬ್ಬಾಸ್ ಖುತುಬಿನಗರ,ಕೆ.ಎಚ್ ಮೂಸಕುಂಞಿ ಬದ್ರಿಯಾ ನಗರ,ಅಬ್ದುಲ್ ಖಾದರ್ (ಸೇಕಬ್ಬ) ಪದಿಯಾರೆ, ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ,ಅಬ್ದುಲ್ ಖಾದರ್ (ಅಝೀಝ್) ಸಾಗ್, ಇಬ್ರಾಹೀಂ ಹಾಜಿ ರಹ್ಮತ್ ನಗರ,ಅಬ್ದುಸ್ಸಲಾಂ ಬಾಕಿಮಾರ್, ಫಾರೂಖ್ ಸಖಾಫಿ ಮೀಂಪ್ರಿ,ಬಷೀರ್ ಲತೀಫಿ ಕುರಿಯ, ಇರ್ಫಾನ್ ಸಖಾಫಿ ಖುತುಬಿನಗರ,ಸ್ವಾದಿಖ್ ಕುರಿಯ,ಹುಸೈನಾರ್ ಮೀಂಪ್ರಿ,ಜಲೀಲ್ ಖುತುಬಿನಗರ,ಸೈಫುದ್ದೀನ್ ಬೆಳರಿಂಗೆ,ಶಮ್ಮಾಸ್ ಕುರಿಯ ರವರನ್ನು ಆಯ್ಕೆ ಮಾಡಲಾಯಿತು.
ಅಕ್ಟೋಬರ್ 2 ರಂದು ಕೋ ಆರ್ಡಿನೇಶನ್ ಸಮಿತಿ ಅಧೀನದಲ್ಲಿ ಬೃಹತ್ ಹುಬ್ಬುರ್ರಸೂಲ್ ಮೀಲಾದ್ ಸಮಾವೇಶ ನಡೆಯಲಿದ್ದು, ಪ್ರಮುಖ ವಾಗ್ಮಿಗಳು, ಧಾರ್ಮಿಕ,ಸಾಮಾಜಿಕ ನಾಯಕರು ಪ್ರಸ್ತುತ ಸಮಾವೇಶದಲ್ಲಿ ಭಾಗವಹಿಸಲಿರುವರು.
ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್ ಸ್ವಾಗತಿಸಿ,ಕೋ ಆರ್ಡಿನೇಶನ್ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮೀಂಪ್ರಿ ಧನ್ಯವಾದ ಅರ್ಪಿಸಿದರು.