ಮನಾಮ : ಕರ್ನಾಟಕ ಎನ್‌ಆರ್‌ಐ (ಅನಿವಾಸಿ ಭಾರತೀಯ) ಘಟಕವನ್ನು ಇತ್ತೀಚೆಗೆ ಬಹರೈನ್ ನಲ್ಲಿ ಸ್ಥಾಪಿಸಲಾಗಿದೆ.
ಇದರ ಕಾರ್ಯಕಾರಿ ಸಮಿತಿ ರಚಿಸಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು, ಅಧ್ಯಕ್ಷರಾಗಿ ರಾಜ್ ಕುಮಾರ್ ಭಾಸ್ಕರ್, ಉಪಾಧ್ಯಕ್ಷ ಆಗಿ ವಿಜಯ್ ಕುಮಾರ್ ನಾಯ್ಕ್ ವೋರ್ಕಾಡಿ, ಪ್ರಧಾನ ಕಾರ್ಯದರ್ಶಿ ಆಗಿ ರೋಶನ್ ಲೂಯಿಸ್ ಖಜಾಂಜಿ ಆಗಿ ಮಂಗೇಶ್ ದೇಸಾಯಿ, ಸಹಾಯಕ ಕಾರ್ಯದರ್ಶಿ ಆಗಿ ಜಮಾಲುದ್ದೀನ್ ವಿಟ್ಲ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮಲ್ಲಿಕಾರ್ಜುನ ಪಾಟೀಲ್. ರಾಘವೇಂದ್ರ ಪ್ರಸಾದ್ ಎಸ್, ಗಣೇಶ ಮಾಣಿಲ ಆಯ್ಕೆಯಾಗಿದ್ದಾರೆ.
ಈ ಸಂಘಟನೆಯು ಗಲ್ಫ್ ರಾಷ್ಟ್ರದ ಬಹರೈನ್ ದ್ವೀಪ ರಾಷ್ಟ್ರದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಕನ್ನಡಿಗರನ್ನು ಸಂಪರ್ಕಿಸಲು ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಬಹರೈನ್ ನಲ್ಲಿ ನೆಲೆಸಿರುವ ಸುಮಾರು 25000 ಕನ್ನಡಿಗರಿಗೆ ಪ್ರಯೋಜನ ಗಳನ್ನು ನೀಡುವುದು ಘಟಕದ ಪ್ರಮುಖ ಗುರಿಯಾಗಿದೆ.