ಕುವೈತ್ ಸಿಟಿ: ಪ್ರಾಯ 30 ದಾಟದ ಪದವಿ ಮತ್ತು ಡಿಪ್ಲೊಮಾ ಪದವೀಧರರಿಗೆ ವಿಧಿಸಲಾದ ನಿಷೇಧವನ್ನು ಸಡಿಲಿಸಲಾಗಿದೆ ಎಂದು ಸಮಾಜ-ಕೈಗಾರಿಕಾ ವ್ಯವಹಾರಗಳ ಸಚಿವ ಹಿಂದ್ ಅಲ್ ಸಬೀಹ್ ಅವರು ಹೇಳಿರುವುದಾಗಿ ಪ್ರಾದೇಶಿಕ ಪತ್ರಿಕೆಯೊಂದು ವರದಿ ಮಾಡಿದೆ.
30 ವರ್ಷ ವಯಸ್ಸಿಗಿಂತ ಕೆಳಗಿನವರಿಗೆ ಜುಲೈ 1 ರಿಂದ ವೀಸಾ ತಡೆಯಲಾಗುವುದು ಎನ್ನಲಾಗಿತ್ತು.ಖಾಸಗಿ ತೈಲ ವಲಯಗಳಲ್ಲಿ ಜನವರಿ 1 ರಿಂದ ಜಾರಿಗೆ ಬರಬೇಕಾಗಿದ್ದ ಈ ಕಾಯಿದೆಯನ್ನು ಜೂನ್ ಒಂದಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಮಾನವಸಂಪನ್ಮೂಲ ಸಾರ್ವಜನಿಕ ಪ್ರಾಧಿಕಾರದ ನಿರ್ದೇಶನದಲ್ಲಿ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಪತ್ರಿಕಾ ವರದಿ ಹೇಳಿದೆ.
ಕಾರ್ಮಿಕ ವಲಯದಲ್ಲಿ ವಿದೇಶೀಯರ ವರ್ಧನೆ ಮತ್ತು ಪದವಿ ಪಡೆದ ತಕ್ಷಣ ಯಾವುದೇ ಪರಿಶೀಲನೆ ಪೂರ್ಣಗೊಳಿಸದೆ ಕುವೈತ್‌ಗೆ ಆಗಮಿಸಿ ಮೊದಲ ಕಾರ್ಯವಲಯವನ್ನು ತರಬೇತಿ ಕೇಂದ್ರಗಳಾಗಿ ಪರಿವರ್ತಿಸುತ್ತಿದ್ದಾರೆಎಂಬ ಕಾರಣಕ್ಕೆ ನಿಯಂತ್ರಣವನ್ನು ಏರ್ಪಡಿಸಲಾಗಿತ್ತು.ಆದರೆ ಕಾರ್ಮಿಕ ಮಾರುಕಟ್ಟೆಯ ನಿಯಂತ್ರಣಕ್ಕೆ ಪರ್ಯಾಯ ವ್ಯವಸ್ಥೆ ಇದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿದೇಶೀ ಹಣ ವಿನಿಮಯಕ್ಕೆ ತೆರಿಗೆ ಸಡಿಲಗೊಳಿಸಲಾಗುವುದೇ?
ವಿದೇಶಿಗಳಿಗೆ ಹಣ ವಿನಿಮಯಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಅಂಗೀಕರಿಸಬೇಕಾಗಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಸಂಸತ್ತಿನ ಹಣಕಾಸು ಸಮಿತಿಯು ತೆರಿಗೆ ಪ್ರಸ್ತಾಪವನ್ನು ಶಿಫಾರಸು ಮಾಡಿದ್ದವು. ಈ ಪ್ರಸ್ತಾಪ ಸಂಸತ್ತಿನಲ್ಲಿ ಚರ್ಚಿಗೆ ಬರಬೇಕಾಗಿದೆ. ಈ ನಡುವೆ ತೆರಿಗೆ ಪ್ರಸ್ತಾಪವನ್ನು ಅಂಗೀಕರಿಸದಿರಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಸೂಚನೆ ಹೊರಬಿದ್ದಿದೆ.