ಸೌದಿ: ಉಮ್ರಾ ತೀರ್ಥಯಾತ್ರೆಗಾಗಿ ಆಗಮಿಸಿ ಕಾಲಾವಧಿಯನ್ನು ಮೀರಿ ಸೌದಿಯಲ್ಲಿರುವವರಿಗೆ ಸೌದಿ ಪಾಸ್ಪೋರ್ಟ್ ವಿಭಾಗವು ಎಚ್ಚರಿಕೆ ನೀಡಿದೆ.
ವೀಸಾದ ಅನುಮತಿಗಿಂತ ಹೆಚ್ಚಿನ ದಿನ ಸೌದಿಯಲ್ಲಿ ಉಳಿದರೆ, ಅವರು ಆರು ತಿಂಗಳ ವರೆಗೆ ಸೆರೆವಾಸ ಎದುರಿಸಬೇಕಾಗುತ್ತದೆ ಮತ್ತು 50,000 ಸೌದಿ ರಿಯಾಲ್ ದಂಡೊಂದಿಗೆ ಗಡಿಪಾರಿಗೂ ಗುರಿಯಾಗ ಬೇಕಾಗುತ್ತದೆ.
ಮಕ್ಕಾ, ಮದೀನಾ, ಜಿದ್ದಾ ಮುಂತಾದ ಕಡೆಗೆ ಯಾತ್ರಾರ್ಥಿಗಳು ಪ್ರಯಾಣ ಮಾಡಬೇಕಾದರೂ ವೀಸಾದಲ್ಲಿ ಕಾಲಾವಧಿ ಇರಬೇಕು. ವಲಸಿಗರು ಮತ್ತು ವೀಸಾ ಮುಕ್ತಾಯಗೊಂಡವರಿಗೆ ಆಶ್ರಯ ನೀಡುವ ದೇಶೀಯರು ಅಥವಾ ವಿದೇಶಿಯರು ಒಂದೇ ರೀತಿಯ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಜವಾಝಾತ್ ಎಚ್ಚರಿಕೆ ನೀಡಿದೆ.