ಕಿನ್ಯಾ: ಇಲ್ಲಿನ ಖುತುಬಿ ನಗರ ನಿವಾಸಿ, ಕಿನ್ಯಾ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಗ್ರಾಮ ಪಂಚಾಯತ್ ಸದಸ್ಯ ಸಿರಾಜುದ್ದೀನ್ ಕಿನ್ಯರಿಗೆ ಪಿತೃವಿಯೋಗ.
ಸಮಾಜ ಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ಎಲ್ಲರೊಂದಿಗೂ ಅತ್ಯಂತ ಪ್ರೀತಿ ಸಹನೆಯಿಂದ ಬೆರೆಯುವ ನಾಯಕರಾದ ಸಿರಾಜುದ್ದೀನ್ ಕಿನ್ಯ ಇವರ ತಂದೆ ಅರಬಿ ಕುಂಞಿ ಹಾಜಿ(87) ಖುತುಬಿನಗರ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.
ಅವರ ಅಗಲಿಕೆಯ ದುಃಖವನ್ನು ಸಹಿಸಲು ಬಂಧು-ಬಳಗದವರಿಗೆ ಅಲ್ಲಾಹನು ತಾಳ್ಮೆ-ಸಹನೆ ಶಕ್ತಿಯನ್ನು ಕರುಣಿಸಲಿ, ಅವರ ಪಾರತ್ರಿಕ ವಿಜಯಕ್ಕಾಗಿ ಎಲ್ಲರೂ ಪ್ರಾರ್ಥಿಸುವಂತೆ ಪಂಚಾಯತ್ ಉಪಾಧ್ಯಕ್ಷರಾದ ಫಾರೂಕ್ ಕಿನ್ಯಾ ಹಾಗೂ ಸದಸ್ಯರಾದ ಫಯಾಝ್ ಕಿನ್ಯಾ ರವರು ಸಾಮಾಜಿಕ ಜಾಲತಾಣಗಳ ಮೂಲಕ ವಿನಂತಿಸಿದ್ದಾರೆ.