ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಅಬುಧಾಬಿ ನಡೆಸುವ ದಾರುಲ್ ಅಮಾನ್ ವಸತಿ ನಿಲಯ ಯೋಜನೆಯ ನಾಲ್ಕನೇ ಮನೆಯ ಹಸ್ತಾಂತರವು ಫೆ. 3 ಶನಿವಾರ ಬೆಳ್ತಂಗಡಿ ತಾಲೂಕಿನ ಬದ್ಯಾರಿನಲ್ಲಿ ನಡೆಯಲಿದೆ.ದಶಮಾನೋತ್ಸವ ಸಂಭ್ರಮಿಸುತ್ತಿರುವ ಕೆಸಿಎಫ್ ವಿವಿಧ ಯೋಜನೆಗಳ ಮುಖಾಂತರ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಸಂಘಟನೆಯ ಹಿರಿಮೆಗೆ ದಾರುಲ್ ಅಮಾನ್ ನೂತನ ವಸತಿಯು ಗರಿಯಾಗಿದೆ.
ಯುಎಇ ರಾಜಧಾನಿ ಅಬುಧಾಬಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಂದ (ಕೆಸಿಎಫ್ ಕಾರ್ಯಕರ್ತರು) ನಡೆಸಲ್ಪಡುವ ಕರುಣೆಯ ನೆರಳು ಯೊಜನೆಯ ದಾರುಲ್ ಅಮಾನ್ ವಸತಿಯ ನಾಲ್ಕನೇ ಫಲಾನುಬಾವಿಯಾಗಿ ಬೆಳ್ತಂಗಡಿ ತಾಲೂಕಿನ ಬದ್ಯಾರು ನಿವಾಸಿಯನ್ನು ಆಯ್ಕೆ ಮಾಡಲಾಗಿತ್ತು. ಇದೀಗ ವಸತಿಯ ಕಾಮಗಾರಿಯೂ ಸಂಪೂರ್ಣವಾಗಿದ್ದು, ಉಧ್ಘಾಟನೆಗೆ ಸಜ್ಜಾಗಿದೆ.
ಫೆ. 3 ರಂದು ನಡೆಯಲಿರುವ ಉಧ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಝ್ರತ್ ಫಾಝಿಲ್ ರಝ್ವಿ, ಮಲ್ಜಹ್ ವಿಧ್ಯಾ ಸಂಸ್ಥೆಯ ರುವಾರಿ ಜಲಾಲುದ್ದೀಬ್ ತಂಙಳ್, ಮನ್ಶರ್ ಸಂಸ್ಥೆಯ ರುವಾರಿ ಉಮರ್ ಅಸ್ಸಖಾಫ್ ತಂಙಳ್, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ, ಎಸ್.ವೈ.ಎಸ್ ರಾಜ್ಯ ನಾಯಕರಾದ ಜಿ.ಎಂ ಕಾಮಿಲ್ ಸಖಾಫಿ, ಎಸ್.ಪಿ ಹಂಝ ಸಖಾಫಿ, ಮೆಹ್ಬೂಬ್ ಸಖಾಫಿ, ಹಫೀಲ್ ಸ ಅದಿ ಕೆಸಿಎಫ್ ಅಬುಧಾಬಿ ಝೋನ್ ನಾಯಕರಾದ ಹಸೈನಾರ್ ಅಮಾನಿ, ರಝಾಕ್ ಹಾಜಿ ಜೆಲ್ಲಿ ಹಾಗೂ ಹಕೀಂ ತುರ್ಕಳಿಕೆ ನವಾಜ್ ಹಾಜಿ ಕೊಟೆಕಾರ್ ಉಮ್ಮರ್ ಈಶ್ವರಮಂಗಿಲ NK ಸಿದ್ದೀಕ್ ಅಳಿಕೆ ಸೇರಿದಂತೆ ಸ್ಥಳೀಯ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.