ಸುಳ್ಯ: ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ರಿ ಎಲಿಮಲೆ ಇದರ ರೂಬಿ ಜುಬಿಲಿ ಕಾರ್ಯಕ್ರಮದ ಪ್ರಯುಕ್ತ ಅರಿವಿನ್ ನಿಲಾವ್ ಆತ್ಮೀಯ ಮಜ್ಲಿಸ್ ಸುಳ್ಯ ತಾಲೂಕಿನ ಎಲಿಮಲೆ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಎರಡು ದಿನಗಳ ಕಾರ್ಯಕ್ರಮದ ಸಮಾರೋಪ ದಿನವಾದ ಇಂದು ಮಗ್ರಿಬ್ ನಮಾಝಿನ ಬಳಿಕ ಸಯ್ಯಿದ್ ಝೈನುಲ್ ಆಬಿದೀನ್ ತಂಗಳ್ ಸಮಾರೋಪ ವೇದಿಕೆಯಲ್ಲಿ ದುಆ ಮಾಡಲಿದ್ದಾರೆ.
ಕರ್ನಾಟಕ ಸರ್ಕಾರ ವಿಧಾನ ಸಭಾಧ್ಯಕ್ಷರಾದ ಯುಟಿ ಖಾದರ್ ರವರು ಕಾರ್ಯಕ್ರಮವನ್ನು ಉಧ್ಘಾಟನೆ ಮಾಡಲಿರುವರು.
ಸುಳ್ಯ ತಾಲೂಕಿಗೆ ಪಪ್ರಥಮ ಬಾರಿಗೆ ಆಗಮಿಸುತ್ತಿರುವ ಅರಿವಿನ್ ನಿಲಾವ್ ಆತ್ಮೀಯ ಮಜ್ಲಿಸ್ ನ ರುವಾರಿ ಸಫ್ವಾನ್ ಸಖಾಫಿ ಪತ್ತಪಿರಿಯಂ ಇವರ ನೇತೃತ್ವದಲ್ಲಿ ಇಂದು ರಾತ್ರಿ ಎಲಿಮಲೆಯಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.