ಬುರೈದಾ, ಜನನರಿ 24 : ಮಂಗಳೂರು ತಾಲೂಕಿನ ಮಂಜನಾಡಿಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ವಿದ್ಯಾ ಸಮುಚ್ಚಯ ಅಲ್ ಮದೀನಾ ಎಜುಕೇಶನಲ್ ಸೆಂಟರ್ ಇದರ 30 ನೇ ವಾರ್ಷಿಕೋತ್ಸವದ ಪ್ರಚಾರಾರ್ಥ ಹಮ್ಮಿಕೊಂಡ “ದ 30 ಹ್ಯಾಪನ್ಸ್” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಲ್ ಮದೀನಾ ಮಂಜನಾಡಿ ಇದರ ಸಾರಥಿ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಸುಪುತ್ರ ಮುಹಮ್ಮದ್ ಕುಂಞ ಅಮ್ಜದಿ ಅಲ್ ಅರ್ಷದಿ ಈ ಬಗ್ಗೆ ಪ್ರಸ್ತಾವಿಸಿದರು.
ವೈಜ್ಞಾನಿಕ ,ವಿದ್ಯಾ ರಂಗದಲ್ಲಿ ಮುನ್ನುಗ್ಗುತ್ತಾ ಸಮೀಪ ಕಾಲದಲ್ಲಿ ಕರಾವಳಿಯಲ್ಲಿ ತಲೆ ಎತ್ತುತ್ತಿರುವ ಸುನ್ನೀ ವಿಧ್ಯಾ ಕೇಂದ್ರಗಳಲ್ಲಿ ಅನಿವಾಸಿಗಳ ಕೊಡುಗೆಯನ್ನು ಅವರು ಶ್ಲಾಗಿಸಿದರು. ಪೆಬ್ರವರಿ 1,2,3,4 ತಾರೀಖುಗಳಲ್ಲಿ ನಡೆಯುವ 30 ನೇ ವಾರ್ಷಿಕೋತ್ಸವದ ಪ್ರಚಾರಾರ್ಥ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಅಲ್ ಮದೀನಾ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಅಲ್ ಮದೀನಾ ಮಂಜನಾಡಿ ಇದರ ಬುರೈದ ಘಟಕದ ಅಧ್ಯಕ್ಷರಾದ ಇಕ್ಬಾಲ್ ಯುನಿವರ್ಸಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಸಿ.ಎಫ್ ನೇತಾರ ಯಾಕೂಬ್ ಸಖಾಫಿ ಉದ್ಘಾಟಿಸಿದರು. ಅಲ್ ಮದೀನಾ ಮಂಜನಾಡಿ ಇದರ ಮದೀನತುಲ್ ಮುನವ್ವರ ಝೋನ್ ಅಧ್ಯಕ್ಷರಾದ ಮುಸ್ತಫಾ ಲತೀಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ದಾರುಲ್ ಹಿಕ್ಮ ಬೆಳ್ಳಾರೆ ಇದರ ಬುರೈದ ಘಟಕದ ಅಧ್ಯಕ್ಷ ಸಾಲಿ ಬೆಳ್ಳಾರೆ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಡಿಕೆಎಸ್ಸೀ ಇದರ ಬುರೈದ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಕಣ್ಣಂಗಾರ್, ದಾರುಲ್ ಇರ್ಷಾದ್ ಮಾಣಿ ಇದರ ಬುರೈದ ಘಟಕದ ಅಧ್ಯಕ್ಷ ಅಬ್ದು ಲ್ ರಝಾಕ್ ನೆಕ್ಕಿಲ್, ಸಅದಿಯಾ ಪೌಂಡೇಶನ್ ಬೆಂಗಳೂರು ಇದರ ಬುರೈದ ಘಟಕದ ಕಾರ್ಯದರ್ಶಿ ಬಶೀರ್ ಕನ್ಯಾನ ಸಹಿತ ವಿವಿಧ ಸಂಘ ಸಂಸ್ಥೆಗಳ ನೇತಾರರು ಭಾಗವಹಿಸಿದರು.
ಅಲ್ ಮದೀನಾ ಸಂಸ್ಥೆಯ ಆರ್ಗನೈಝರ್ ಹೈದರ್ ನಯಿಮೀ ಸ್ವಾಗತಿಸಿ ವಂದಿಸಿದರು.