ಕುವೈತ್: ಕುವೈತ್ ಶೈಖ್ ನವಾಫ್ ಅಲ್ ಅಹ್ಮದ್ ಅಲ್ ಜಾಬಿರ್ ಅಸ್ವಬಾಹ್ ನಿಧನರಾಗಿದ್ದಾರೆ ಎಂದು ಅಮೀರಿ ಕೋರ್ಟ್ ಶನಿವಾರ ಪ್ರಕಟಿಸಿದೆ.ಅವರಿಗೆ 86 ವರ್ಷ ಪ್ರಾಯವಾಗಿತ್ತು.
ಕುವೈತ್ ರಾಷ್ಟ್ರದ ಶೈಖ್ ನವಾಫ್ ಅಲ್ ಅಹ್ಮದ್ ಅಲ್ ಜಾಬಿರ್ ಅಸ್ವಬಾಹ್ ಅವರ ನಿಧನಕ್ಕೆ ಅತೀವ ದುಃಖ ಮತ್ತು ಅತೀವ ಸಂತಾಪ ವ್ಯಕ್ತಪಡಿಸುತ್ತೇವೆ ಎಂದು ರಾಜಮನೆತನ ಹೇಳಿಕೆ ಹೊರಡಿಸಿರುವುದಾಗಿ ದೂರದರ್ಶನದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ತಿಳಿಸಿದೆ. ರಾಜ್ಯ ದೂರದರ್ಶನವು ತನ್ನ ನಿಯಮಿತ ಕಾರ್ಯಕ್ರಮಗಳನ್ನು ಕಡಿತಗೊಳಿಸಿದ್ದು, ಕುರಾನ್ ಪಠಣದ ಪ್ರಸಾರಕ್ಕೆ ಬದಲಾಯಿಸಿದೆ.
ನವೆಂಬರ್‌ನಲ್ಲಿ, ಶೈಖ್ ನವಾಫ್ ಅವರನ್ನು “ತುರ್ತು ಆರೋಗ್ಯ ಸಮಸ್ಯೆಯಿಂದಾಗಿ” ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕೃತ KUNA ಸುದ್ದಿ ಸಂಸ್ಥೆ ತಿಳಿಸಿದೆ.
ಶೈಖ್ ನವಾಫ್ ಅವರು ತಮ್ಮ ಸಹೋದರ ಶೈಖ್ ಸಬಾಹ್ ಅಲ್-ಅಹ್ಮದ್ ಅಲ್-ಜಾಬಿರ್ ಅಲ್- ಸ್ವಬಾಹ್ ಅವರ ಮರಣದ ನಂತರ ಸೆಪ್ಟೆಂಬರ್ 2020 ರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ದೇಶದಲ್ಲಿ 40 ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ ಮತ್ತು ಇಂದಿನಿಂದ (ಶನಿವಾರ) ಮೂರು ದಿನಗಳ ಕಾಲ ಎಲ್ಲಾ ಇಲಾಖೆಗಳಿಗೆ ಅಧಿಕೃತ ರಜೆ ಸಾರಲಾಗಿದೆ.
1937 ರಲ್ಲಿ ಜನಿಸಿದ ಶೈಖ್ ನವಾಫ್ ಅವರು 1921 ರಿಂದ 1950 ರವರೆಗೆ ಕುವೈತ್‌ನ ಆಡಳಿತಗಾರರಾಗಿದ್ದ ದಿವಂಗತ ಶೈಖ್ ಅಹ್ಮದ್ ಅಲ್ ಜಬರ್ ಅಲ್ ಸಬಾಹ್ ಅವರ ಐದನೇ ಪುತ್ರ.