ಮಕ್ಕತುಲ್ ಮುಕರ್ರಮಃ: ದುರಸ್ತಿ ಕಾಮಗಾರಿ ಪೂರ್ಣಗೊಂಡು ಮಕ್ಕಾದಲ್ಲಿರುವ ಕಅಬಾ ಸುತ್ತಲಿನ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿಲಾಯಿತು. ಇನ್ನು ಮುಂದೆ ವಿಶ್ವಾಸಿಗಳಿಗೆ ಎಂದಿನಂತೆ ಕಅಬಾ ಮತ್ತು ಹಜರುಲ್ ಅಸ್ ವದ್ ಅನ್ನು ಸ್ಪರ್ಶಿಸಲು ಸಾಧ್ಯವಾಗಲಿದೆ.
ದುರಸ್ತಿಗಾಗಿ ಕಳೆದ ಶನಿವಾರ ಬೆಳಗ್ಗೆಯಿಂದಲೇ ಕಅಬಾದ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಒಂದು ವಾರದಿಂದ ನಡೆದ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ ಇಂದು ಜುಮಾ ನಮಾಝಿನ ಬಳಿಕ ಬ್ಯಾರಿಕೇಡ್ ಗಳನ್ನು ತೆಗೆಯಲಾಯಿತು. ಕಅಬಾದ ಹೊರ ಗೋಡೆಗಳು, ಛಾವಣಿ ಮತ್ತು ಬಾಗಿಲುಗಳು, ಕಾಬಾವನ್ನು ಆವರಿಸಿರುವ ಕಿಸ್ವಾ ಮತ್ತು ಉತ್ತರದಲ್ಲಿ ಹಿಜ್ರ್ ಇಸ್ಮಾಯಿಲ್ ನಲ್ಲಿ ಮುಖ್ಯವಾಗಿ ದುರಸ್ತಿ ಕಾರ್ಯ ನಡೆಸಲಾಗಿದೆ.
ಬ್ಯಾರಿಕೇಡ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿರುವುದರಿಂದ, ವಿಶ್ವಾಸಿಗಳಿಗೆ ಹಜರುಲ್ ಅಸ್-ವದ್ ಸೇರಿದಂತೆ ಸಂಪೂರ್ಣ ಕಅಬಾವನ್ನು ವೀಕ್ಷಿಸಲು ಮತ್ತು ಸ್ಪರ್ಶಿಸಲು ಸಾಧ್ಯವಾಗಲಿದೆ. ವಿಶೇಷವಾಗಿ ತರಬೇತಿ ಪಡೆದ ತಜ್ಞರ ನೇತೃತ್ವದಲ್ಲಿ ಹಣಕಾಸು ಸಚಿವಾಲಯ ಮತ್ತು ಇತರ ಸರ್ಕಾರಿ ಏಜೆನ್ಸಿಗಳ ಮೇಲ್ವಿಚಾರಣೆಯಲ್ಲಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಯಿತು.