ಸೌದಿ: ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸೌದಿ ರಾಜಕುಮಾರ ಸ್ಥಾನ ಪಡೆದಿದ್ದಾರೆ.ಅಮೆರಿಕಾದ ಫೋರ್ಬ್ಸ್ ಬ್ಯುಸಿನೆಸ್ ನಿಯತಕಾಲಿಕ ಹೊರಡಿಸಿದ ಪಟ್ಟಿಯಲ್ಲಿ ಮುಹಮ್ಮದ್ ಬಿನ್ ಸಲ್ಮಾನ್ ಅವರು ಎಂಟನೆಯ ಸ್ಥಾನದಲ್ಲಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಬಲವಾದ ಹೋರಾಟ, ದೇಶದಲ್ಲಿ ಜಾರಿಗೊಳಿಸಲಾದ ಬೃಹತ್ ಅಭಿವೃದ್ಧಿ ಯೋಜನೆ ಸೇರಿದಂತೆ ದೇಶದ ಪ್ರಗತಿಯ ಗುರಿಯೊಂದಿಗೆ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರಿಗೆ ಈ ಸ್ಥಾನವನ್ನು ಒದಗಿದೆ ಎನ್ನಲಾಗಿದೆ.
ಅಲ್ಲದೆ, ದೇಶದಲ್ಲಿ ಜಾರಿಗೆ ತಂದ ಸಾಮಾಜಿಕ ಸುಧಾರಣೆಗಳು ಸೇರಿದಂತೆ ಅನೇಕ ವಿಷಯಗಳು ಅವರನ್ನು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಗೆ ಸೇರಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿವೆ.
ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರ ಅರಬ್ ಪ್ರಪಂಚದಲ್ಲೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಈ ಹಿಂದೆಯೇ ಗುರುತಿಸಿಕೊಂಡಿದ್ದರು.ಚೀನಾದ ಅಧ್ಯಕ್ಷ ಶಿ ಜಿಂಗ್ಪಿಂಗ್ ವಿಶ್ವದ ಅತ್ಯಂತ ಪ್ರಭಾವೀ ವ್ಯಕ್ತಿಗಳ ಪೈಕಿ ಪ್ರಥಮ ಸ್ಥಾನಿಯಾಗಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ.