janadhvani

Kannada Online News Paper

ಪ್ರಾರ್ಥನೆ ಮತ್ತು ಪ್ರತಿಭಟನಾ ವಿಷಯಗಳ ಬಗ್ಗೆ ಸರಕಾರ, ವಿಶ್ವಸಂಸ್ಥೆ ಸುತ್ತೋಲೆ ಹೊರಡಿಸಲಿ- ಕೆ.ಅಶ್ರಫ್

ಆದರೆ ಸರಕಾರಗಳು ಪ್ರಸ್ತುತ ಜನರು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ಮತ್ತು ಸಾಮೂಹಿಕ ಜನಾಂಗ ಹತ್ಯೆ ಕೃತ್ಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ಅಪರಾಧ ಎಂದು ಬಿಂಬಿಸುವ ಮಟ್ಟಿಗೆ ತಲುಪಿರುವುದು ದುರಂತವೇ ಸರಿ.

ಮಂಗಳೂರು: ಆಧುನಿಕ ಮತ್ತು ಜಾಗತಿಕ ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಜನರು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸುವುದು, ಪ್ರತಿಭಟಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಸೌಂದರ್ಯವಾಗಿದೆ ಮತ್ತು ಹಕ್ಕು ಕೂಡಾ ಹೌದು. ಅದು ನೈಸರ್ಗಿಕವಾಗಿ ಬಂದ ಗುಣ. ಪ್ರಜಾ ಪ್ರಭುತ್ವ ಸಂವಿಧಾನ ಅದನ್ನೇ ಪ್ರತಿಪಾದಿಸುತ್ತದೆ. ಆದರೆ ಸರಕಾರಗಳು ಪ್ರಸ್ತುತ ಜನರು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ಮತ್ತು ಸಾಮೂಹಿಕ ಜನಾಂಗ ಹತ್ಯೆ ಕೃತ್ಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ಅಪರಾಧ ಎಂದು ಬಿಂಬಿಸುವ ಮಟ್ಟಿಗೆ ತಲುಪಿರುವುದು ದುರಂತವೇ ಸರಿ.

ಇತ್ತೀಚೆಗೆ ಭಾರತ ಸರಕಾರ ಮಧ್ಯ ಪ್ರಾಚ್ಯ ದೇಶಗಳ ಅಂತಾರಾಷ್ಟ್ರೀಯ ಬಿಕ್ಕಟನ್ನು ತನ್ನ ಸಾಂಪ್ರದಾಯಿಕ ನಿಲುವು ಮುಖಾಂತರ ವ್ಯಕ್ತ ಪಡಿಸಿದ ಹೊರತಾಗಿಯೂ ಕೂಡಾ ದೆಹಲಿ ಸರಕಾರ ಜನರು, ತಮ್ಮ ಆರಾಧನಾ ಕೇಂದ್ರಗಳಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದನ್ನು, ಪೊಲೀಸು ಕ್ರಮ ಮೂಲಕ ತಡೆ ಒಡ್ಡಲು ಪ್ರಯತ್ನಿಸಿರುವುದು ಖಂಡನೀಯ.

ಅದರಂತೆ ಇತ್ತೀಚೆಗೆ ಸರಕಾರ ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಜನರ ಪ್ರತಿಭಟನೆಯ ಹಕ್ಕನ್ನು ತಡೆದಿವುದು ಅಷ್ಟೇ ಖಂಡನೀಯ.
ಸರಕಾರ ಮತ್ತು ವಿಶ್ವ ಸಂಸ್ಥೆ ಪ್ರಾರ್ಥನೆ ಮತ್ತು ಪ್ರತಿಭಟನೆಯ ಅಧಿಕೃತ ವಿಷಯಗಳ ಬಗ್ಗೆ ಸುತ್ತೋಲೆ ಹೊರಡಿಸಲಿ. ಅದರಲ್ಲಿ ಜನರು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದನ್ನು , ಸಾದ್ಯವಾದರೆ ನಿಷೇಧಿಸುವ ಪ್ರಯತ್ನವನ್ನಂತೂ ಮಾಡದಿರಲಿ ಎಂದು ಕೆ.ಅಶ್ರಫ್ ( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com